ಜನಮನ
ಪ್ರೀತಿಸಿ ಮದುವೆಯಾಗಿದ್ದ ಯುವತಿ ಸಾವು, ವರದಕ್ಷಿಣೆ ಕಿರುಕುಳ,ಸಾವಿನ ಸುತ್ತ ಹಲವು ಅನುಮಾನ

Views: 0
ಮಂಡ್ಯ: ಕೇವಲ 2 ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿ ಒಬ್ಬಳು ಅನುಮಾನಸ್ಪಾದವಾಗಿ ನೇಣು ಬಿಗಿದು ಸಾವನ್ನಪ್ಪಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನುಷಾ (23) ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಯುವತಿ. ಕೇವಲ 2 ತಿಂಗಳ ಹಿಂದಷ್ಟೇ ಪ್ರವೀಣ್ ಎನ್ನುವ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ಈ ಇಬ್ಬರು ಮಂಡ್ಯದ ಮಳ್ಳವಳ್ಳಿ ಮೂಲದವರಾಗಿದ್ದಾರೆ. ಆದ್ರೆ ಮದುವೆ ಆದ ಬಳಿಕ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಅತ್ತೆ ನಾಗಮ್ಮ ಮತ್ತು ಸೋದರ ಮಾವ ರಾಜೇಶ್ ಸೇರಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಸಂಬಂಧ ಹಲ್ಲೆ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ವರದಕ್ಷಿಣೆ ಕಿರುಕುಳದಿಂದಲೇ ಬೇಸತ್ತು ಯುವತಿ ನೇಣಿಗೆ ಶರಣಾಗಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.






