ಪೋಷಕರೇ ಮಕ್ಕಳನ್ನು ಎಲ್ಲಿಗಾದ್ರೂ ಕರ್ಕಂಡು ಹೋಗೋ ಮುನ್ನ ಎಚ್ಚರ! 3 ವರ್ಷದ ಪುಟ್ಟ ಬಾಲೆಯೊಬ್ಬಳ ಮೇಲೆ ಗ್ಲಾಸ್ ಡೋರ್ ಬಿದ್ದು ಸಾವು

Views: 0
ಮಕ್ಕಳ ದೇವರು ಇದ್ದಂತೆ. ಇವರನ್ನು ಜವಾಬ್ದಾರಿಯಿಂದ ನೋಡಿಕೊಳ್ಳೋ ಹೊಣೆ ಪೋಷಕರದ್ದು. ಮಕ್ಕಳು ಬೇಕು ಎಂದು ಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಜವಾಬ್ದಾರಿಯಿಂದ ಅವರನ್ನು ನೋಡಿಕೊಳ್ಳುವುದು ಇಂಪಾರ್ಟೆಂಟ್. ಸ್ವಲ್ಪ ಯಾಮಾರಿದ್ರೂ ಮಕ್ಕಳ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಆಟ ಆಡುವಾಗ ದಿಢೀರ್ ಗಾಡಿಗೆ ಅಡ್ಡ ಹೋಗುವುದು, ಕಣ್ಣಿಗೆ ಕಾಣುವುದು ತಿನ್ನುವುದು, ಗುಂಡಿಗೆ ಆಯತಪ್ಪಿ ಬೀಳುವುದು ಹೀಗೆ ಹಲವು ಸಮಸ್ಯೆಗಳು. ಹೀಗಾಗಿ ಅವರನ್ನು ತುಂಬಾ ಎಚ್ಚರದಿಂದಲೇ ಕೇರ್ ಮಾಡಬೇಕು.
ಹೌದು, ಇಷ್ಟು ಮಾತ್ರವಲ್ಲ ಮಕ್ಕಳನ್ನ ಯಾವುದೇ ಶಾಪ್ಗೆ ಕರೆದುಕೊಂಡು ಹೋದ್ರೂ ಪೋಷಕರು ಜಾಗರೂಕರಾಗಿ ಇರಬೇಕು ಅನ್ನೋದಕ್ಕೆ ಇದೊಂದು ನಿದರ್ಶನ. 3 ವರ್ಷದ ಪುಟ್ಟ ಬಾಲೆಯೊಬ್ಬಳ ಮೇಲೆ ಗ್ಲಾಸ್ ಡೋರ್ ಬಿದ್ದು ಮೃತಪಟ್ಟ ಘಟನೆ ಪಂಜಾಬ್ನ ಲೂದಿಯಾನದಲ್ಲಿ ನಡೆದಿದೆ.
ಗಾರ್ಮೆಂಟ್ ಶೋರೂಮ್ ಬಾಗಿಲ ಬಳಿ ಬಂದ ಪುಟ್ಟ ಬಾಲಕಿ, ಗ್ಲಾಸ್ ಡೋರ್ ಮೇಲೆ ತನ್ನ ಕೈಯಿಟ್ಟಿದ್ದಾಳೆ. ಈ ವೇಳೆ ಸಡನ್ ಆಗಿ ಗ್ಲಾಸ್ ಡೋರ್ ಮಗು ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಕೂಡಲೇ ಅಲ್ಲಿದ್ದವರು ಮಗುವನ್ನ ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿದಿಲ್ಲ.








