ಇತರೆ

ಪಾರ್ಟಿ ವೇಳೆ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

Views: 78

ಕನ್ನಡ ಕರಾವಳಿ ಸುದ್ದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಬಿಡುವಿನ ವೇಳೆಯಲ್ಲಿ ಕೆಲಸ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೇ 11ರಂದು ಈ ಘಟನೆ ಸಂಭವಿಸಿದೆ. ಸಂತ್ರಸ್ತೆಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, ತನ್ನ ಓದಿನ ಬಿಡುವಿನ ಸಮಯದಲ್ಲಿ ಜೀವನೋಪಾಯಕ್ಕಾಗಿ ಸ್ಥಳೀಯ ಮೋಮೊಸ್‌ ಅಂಗಡಿಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು.

ಮೋಮೊಸ್ ಅಂಗಡಿಯ ಮಾಲೀಕರಾದ ಗೋಶ್ ಮತ್ತು ಅತುಲ್‌ ಎಂಬುವವರು ತಮ್ಮ ಅಂಗಡಿ ಮಾರಾಟ ಮಾಡಲು ಮುಂದಾಗಿದ್ದರು. ಈ ವ್ಯವಹಾರಕ್ಕೆ ಮಧ್ಯವರ್ತಿಯಾಗಿ ಹೈನಾಸ್ ಎಂಬ ವ್ಯಕ್ತಿ ಬಂದಿದ್ದ. ಅಂಗಡಿ ಮಾರಾಟದ ವಿಚಾರವಾಗಿ ಚರ್ಚಿಸಲು ಮಾಲೀಕರಾದ ಅತುಲ್, ಗೋಶ್, ಮಧ್ಯವರ್ತಿ ಹೈನಾಸ್‌ ಮತ್ತು ಈ ವಿದ್ಯಾರ್ಥಿನಿ ಸೇರಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯ ನಡುವೆ ಮಾಲೀಕರಾದ ಅತುಲ್ ಮತ್ತು ಗೋಶ್ ಇಬ್ಬರೂ ಊಟ ತರಲು ಹೊರಗೆ ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿ ಹೈನಾಸ್ ಯುವತಿಯ ಮೇಲೆ ಅತ್ಯಾರ ಎಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

Related Articles

Back to top button
error: Content is protected !!