ಧಾರ್ಮಿಕ

ಪದ್ಮಶಾಲಿ/ಶೆಟ್ಟಿಗಾರ ಸಮುದಾಯ ಶೃಂಗೇರಿ ಬೇಟಿ: ಸಮಾಜ ಎದುರಿಸುತ್ತಿರುವ ಗೊಂದಲಗಳಿಗೆ ಪರಿಹಾರವಾಗಲಿ!?

Views: 11

ಕರಾವಳಿ ಕರ್ನಾಟಕದ ಪದ್ಮಶಾಲಿ/ ಶೆಟ್ಟಿಗಾರ ಸಮುದಾಯದವರು ತಮ್ಮದೇ ಆದ 16 ದೇವಸ್ಥಾನಗಳನ್ನು ಹೊಂದಿ ಆರಾಧಿಸುತ್ತಿದ್ದಾರೆ. ಮತ್ತು ಸಮಾಜದ ಏಳಿಗೆಗಾಗಿ ಸಂಘಗಳನ್ನು ಕಟ್ಟಿಕೊಂಡು ಮುನ್ನಡೆಯುತ್ತಿದ್ದಾರೆ. ಸಮಾಜ ಬಾಂಧವರು ಶ್ರೀ ಕ್ಷೇತ್ರಕ್ಕೆ ತೆರಳಿ ಶೃಂಗೇರಿ ಶ್ರೀ ಜಗದ್ಗುರು ದರ್ಶನ ಅಭಿವಂದನಾ ಕಾರ್ಯಕ್ರಮ 10.09.2023 ರಂದು ನಡೆಯಲಿದೆ.

ಈ ಕುರಿತಂತೆ ಸಮಾಜ ಬಾಂಧವರು ನಮಗೆ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕು.  16 ದೇವಸ್ಥಾನದವರು, ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಂಘದವರು ಒಟ್ಟುಗೂಡಿ ಇದರ ಗುರಿ ಮತ್ತು ಉದ್ದೇಶಗಳ ಬಗ್ಗೆ ಸಮಗ್ರ ಚಿಂತನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪದ್ಮಶಾಲಿ/ ಶೆಟ್ಟಿಗಾರ ಸಮುದಾಯ ನಮ್ಮ ಪೂಜ್ಯರಾದ ಶೃಂಗೇರಿ ಶ್ರೀಮದ್ ಜಗದ್ಗುರುವರ್ಯರನ್ನು ಭೇಟಿಯಾಗಿ ಶ್ರೀಗಳವರ ಪಾದ ಪೂಜೆ, ಮಂತ್ರಾಕ್ಷತೆ ಪಡೆಯುವ ಈ ಸಂದರ್ಭದಲ್ಲಿ ನಮ್ಮೀ ಸಮಾಜ ಎದುರಿಸುತ್ತಿರುವ ಹಲವಾರು ಗೊಂದಲಗಳಲ್ಲಿ ಪ್ರಾಮುಖ್ಯವಾಗಿ ಈ ಕೆಳಗಿನ ಸಮಸ್ಯೆಗಳಿಗೆ ಪೂಜ್ಯ ಗುರುಗಳು ಯೋಗ್ಯವಾದ ಮಾರ್ಗದರ್ಶನ ನೀಡುವಂತೆ ಪ್ರಾರ್ಥನೆ

1.ನಮ್ಮ ಸಮಾಜವು ಮೂಲತಹ ಮಾತೃ ಪ್ರಧಾನ ವ್ಯವಸ್ಥೆ ಅನುಸರಿಸಬೇಕಾ? ಪಿತ್ರಪ್ರಧಾನ ವ್ಯವಸ್ಥೆಯಾ?

2.ನಾವು ಮೂಲತಃ ಯಾವ ವರ್ಣ ನೀತಿಗೆ ಸೇರಿದವರು.

3.ನಮಗೆ ಪ್ರಧಾನ ಕುಲದವರು ಶ್ರೀ ವೀರಭದ್ರ ದೇವರು. ಶ್ರೀ ಮಹಮ್ಮಾಯಿದೇವಿಯೋ?

4.ಅಮೆ, ಸೂತಕ ಇತ್ಯಾದಿಗಳನ್ನು ನಾವು ಎಷ್ಟು ದಿನ ಪಾಲಿಸತಕ್ಕದ್ದು (ಈಗಿರುವ ಸಂಪ್ರದಾಯ 16 ದಿನವೆಂದು)

5.ಉಪನಯನ ಸಂಪ್ರದಾಯ ನಮ್ಮ ಸಮಾದಾಯಕ್ಕೆ ಅನ್ವಯವಾಗುವುದೋ?

—ಶ್ರೀ ಹರಿಶ್ಚಂದ್ರ ಶೆಟ್ಟಿಗಾರ್, ಅಧ್ಯಕ್ಷರು 

ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಬಂಗ್ರ ಮಂಜೇಶ್ವರ, ಕಾಸರಗೋಡು ಜಿಲ್ಲೆ.

 

ಒಂದು ಸಂಘಟನೆ ಯಾ ಸಮೂಹಕ್ಕೆ ಗುರಿಯಿರಬೇಕು. *ಈ ಸಮೂಹದ ಗುರಿ ಅಥವಾ ಉದ್ದೇಶವೇನು ?* ಅದು ಪ್ರಕಟಪಡಿಸಬೇಕು.

ಗುರುವಿನ ಮಾರ್ಗದರ್ಶನ ನಮ್ಮ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕು. ಈ ಮಾತನ್ನು ಎಲ್ಲ 16 ದೇವಳಗಳೂ ಇದರ ಅಗತ್ಯತೆ ಬಗ್ಗೆ ಚಿಂತನೆ ನಡೆಸುವಂತಾಗಬೇಕು. ಒಪ್ಪಬೇಕು .

ಈ ಕುರಿತು ನನ್ನ ಅಭಿಪ್ರಾಯವನ್ನು ಹಲವು ಕಡೆ ಹೇಳಿದ್ದೇನೆ. ಜಗದ್ಗುರುಗಳನ್ನು ಗುರುಗಳೆಂದು ತೀರ್ಮಾನಿಸಿದ್ದು ತಪ್ಪು. ಅದನ್ನು ಅವರು ಒಪ್ಪಿಕೊಂಡದ್ದೂ ಸರಿಯಲ್ಲ. ಇಡೀ ದಕ್ಷಿಣ ಭಾರದ ಹಿಂದೂ ಸಮಾಜದ ಮಾರ್ಗದರ್ಶಕರಾದ ಅವರು ನಮಗೊಂದು ಗುರುಪೀಠ ದೊರಕಿಸಿಕೊಡುವುದರ ಬಗ್ಗೆ ಮಾರ್ಗ ದರ್ಶನ ಕೊಡಬೇಕು. ಅಥವಾ ನಾವೇ ಆ ಬಗ್ಗೆ ನಮಗೊಬ್ಬ ಮಾರ್ಗದರ್ಶಕ ಗುರುವನ್ನು ತೋರಿಸಕೊಡುವಂತೆ ಕೋರಿಕೊಳ್ಳಬೇಕು. ಸಮಾಜದ ಸರ್ವರೂ ಗುರು ಆರಾಧನೆಯಲ್ಲಿ ,ಒಂದು ಇತಿ ಮಿತಿಯೊಳಗೆ, ಭಾಗವಹಿಸಬೇಕು. ಅದು ಮಾತ್ರ ಸರಿಯಾದ ಗುರುವಿನ ಆರಾಧನೆಯಾದೀತು.

ಅದು ಬಿಟ್ಟು ಸಂಘದ ಮುಖಂಡರುಗಳೋ ದೇವಳದ ಒಬ್ಬಿಬ್ಬರೋ ಹೋಗಿ ಪಾದ ಪೂಜೆ ಮಾಡೋದರಿಂದ ಪರಿಪೂರ್ಣತೆಯಾಗದು. ಆ ನಿಟ್ಟಿನಲ್ಲಿ ಈ ಸಮೂಹ ಕೆಲಸಮಾಡಬೇಕು. ಸಂಘ 16 ದೇವಳಗಳನ್ನು ಒಟ್ಟುಗೂಡಿಸುವಲ್ಲಿ ಸಹಕಾರಿಯಾಗಬೇಕು. ಎಲ್ಲ ದೇವಳಗಳೂ ಈ ಬಗ್ಗೆ ಚಿಂತನೆ ಮಾಡುವಂತೆ ಮಾಡಬೇಕು. ಕೂಡುಕಟ್ಟಿನವರನ್ನು ಒಟ್ಟುಗೂಡಿಸುವುದರಲ್ಲಿ ದೇವಳಗಳು ಮುಂದಾಗಬೇಕು.

ಶೃಂಗೇರಿಯವರ ಮಾರ್ಗದರ್ಶನದಲ್ಲೇ ನಮಗೊಂದು ಗುರು ,ಮಠ ಸ್ಥಾಪನೆಯಾಗಲಿ. ದೇವರ ಆರಾಧನೆಯಿಂದ ಹಿಡಿದು ಸರ್ವ ವಿದದಲ್ಲೂ ಶ್ರೇಷ್ಠತೆಯನ್ನು ಕಾಣುವಂತಾಗಲಿ, ಸಮಾಜ ಗುರುಶಾಪದಿಂದ ಮುಕ್ತಿ ಹೊಂದುವಂತಾಗಲಿ  ಆ ನಿಟ್ಟಿನಲ್ಲಿ ಇದರ ಆಡಳಿತ ಮಂಡಳಿ ಕಾರ್ಯ ಪ್ರವರ್ತರಾಗಲಿ. ಶುಭವಾಗಲಿ.

—–ಗೋಪಾಲ.H.A

ಮಾಜಿ ಮೊಕ್ತೇಸರರು ಶ್ರೀ ಬೃಹ್ಮಲಿಂಗವೀರಭದ್ರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಬಾರಕೂರು 

 

 

*ಓಶೋ* ಅವರನ್ನು ಯಾರೋ ಕೇಳಿದರು

“ ರಾಜಕಾರಣಿಗಳೆಂಬ ಲಂಪಟರಿಂದ ಈ ದೇಶಕ್ಕೆ ಮುಕ್ತಿ ಯಾವಾಗ ?” ಎಂದು.

ಅದಕ್ಕೆ *ಓಶೋ* ಉತ್ತರಿಸಿದ್ದು ಹೀಗೆ:

“ಉತ್ತರ ಕಠಿಣವಾಗಿದೆ…ಪ್ರಶ್ನೇ ರಾಜಕಾರಣಿಗಳಿಂದ ಮುಕ್ತಿಗೆ ಸಂಬಂದ್ಧಿಸಿದ್ದಲ್ಲ . ನಿಮ್ಮ ಅಜ್ಞಾನದ ಮುಕ್ತಿಗೆ ಸಂಬಂಧಿಸಿದ್ದು.

ನೀವು ಎಲ್ಲಿಯವರೆಗೆ ಅಜ್ಞಾನಿಯಾಗಿರುವಿರೋ ಅಲ್ಲಿಯವರೆಗೆ ನಿಮ್ಮ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ನಿಮ್ಮ ಶೋಷಣೆ ನಿಮ್ಮ ಜಾಗೃತಿಯೊಂದಿಗೆ ಸಂಬಂಧಿಸಿದೆ.

ಇಲ್ಲದಿದ್ದರೆ ನಿಮ್ಮನ್ನು ಯಾರು ಶೋಷಿಸಿದರೆ ವ್ಯತ್ಯಾಸವೇನು ?

ಯಾವ ಪಕ್ಷದ, ಯಾವ ದ್ವಜದ ಹೆಸರಲ್ಲಿ ಶೋಷಿಸಿದರೆ ವ್ಯತ್ಯಾಸವೇನು? ಶೋಷಣೆಗೆ ಒಳಪಡುತ್ತಲೇ ಇರುತ್ತೀರಿ.

ರಾಜಕಾರಣಿಗಳಲ್ಲದಿದ್ದರೆ ಪಂಡಿತರು, ಪುರೋಹಿತರು, ಮೌಲ್ವಿಗಳು ಯಾರಾದರೂ ಸರಿ ನಿಮ್ಮ ರಕ್ತವನ್ನು ಹೀರುವುದಂತು ಖಚಿತ.

ಎಲ್ಲಿಯವರೆಗೂ ನೀವು ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ನೀವು ಲೂಟಿಯಾಗುತ್ತಲೇ ಇರುವಿರಿ.

ನಿಮ್ಮನ್ನು ದೋಚುವವರ ಹೆಸರು ಮಾತ್ರ ಬದಲಾಗುವುದು.

ದುಷ್ಷ್ಟ ರಾಜಕಾರಣಿಗಳು ದೋಚುವುದನ್ನು ಯಾವಗ ನಿಲ್ಲಿಸುವರು ಎಂದು ಕೇಳದಿರಿ.

ಇದು ಅರ್ಥಹೀನ ಪ್ರಶ್ನೇ.

ನನ್ನ ಜಾಗೃತಿ ಯಾವಾಗ ಎಂದು ಕೇಳಿ. ಸುಳ್ಳನ್ನು ಸುಳ್ಳಂತೆ ನೋಡುವ ಕ್ಷಮತೆ ಬೆಳಿಸಿಕೊಳ್ಳಿ. ಎಲ್ಲಿಯವರೆಗೂ ಮನುಜಕುಲ ಸುಳ್ಳನ್ನು ಸುಳ್ಳಾಗಿ ನೋಡುವುದಿಲ್ಲವೋ ಅಲ್ಲಿಯವರೆಗೆ ಅವನಿಗೆ ಮುಕ್ತಿಯಿಲ್ಲ.”

—-ದಾಮೋದರ ಶೆಟ್ಟಿಗಾರ. ಅರಣ್ಯಾಧಿಕಾರಿಗಳು ಸಿದ್ಧಕಟ್ಟೆ

 

 

Related Articles

Back to top button
error: Content is protected !!