ಜನಮನ

ಪತ್ನಿಯನ್ನು ರಾಗಿಮುದ್ದೆಯಲ್ಲಿ ಸೈನೈಡ್‌ ಬೆರೆಸಿ ಕೊಂದ ಪತಿರಾಯ,ರೋಚಕ ಟ್ವಿಸ್ಟ್ ಇಲ್ಲಿದೆ… 

Views: 14

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ ದರ್ಶನ್‌ನ ಪತ್ನಿ ಶ್ವೇತಾ ಅವರ ಸಾವಿಗೆಸಂಬಂಧಿಸಿ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ಮೊದಲು ಇದೊಂದು ಹೃದಯಾಘಾತ ಎಂದು ಹೇಳಲಾಗಿದ್ದರೆ, ಬಳಿಕ ಗಂಡನೇ ವಿಷದ ಇಂಜೆಕ್ಷನ್‌ ಚುಚ್ಚಿ ಕೊಂದಿದ್ದಾನೆ ಎಂಬುದು ಬಯಲಾಯಿತು. ಇದೀಗ ಅದಕ್ಕಿಂತಲೂ ಭೀಕರವಾದ ಸತ್ಯ ಬಯಲಾಗಿದೆ. ಅದೇನೆಂದರೆ ದರ್ಶನ್‌ ತನ್ನ ಪತ್ನಿಯನ್ನು ಕೊಂದಿದ್ದು ವಿಷದ ಇಂಜೆಕ್ಷನ್‌ ಚುಚ್ಚಿ ಅಲ್ಲ, ಬದಲಾಗಿ ರಾಗಿ ಮುದ್ದೆಯಲ್ಲಿ ಸೈನೈಡ್‌ ಬೆರೆಸಿ ಕೊಲೆ ಮಾಡಿದ್ದಾನೆ ಎನ್ನುವುದು ಮರಣೋತ್ತರ ಪರೀಕ್ಷೆ ಮತ್ತು ಪೊಲೀಸ್‌ ವಿಚಾರಣೆಯಲ್ಲಿ ಬಯಲಾಗಿದೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿರುವ ದರ್ಶನ್‌ ಮನೆಗೆ ನಾಲ್ಕು ದಿನಗಳ ಹಿಂದೆ ಶ್ವೇತಾ (31) ಬಂದಿದ್ದರು. ಆಕೆ ಆರೋಗ್ಯವಾಗಿಯೇ ಇದ್ದರು. ಆದರೆ, ಒಮ್ಮಿಂದೊಮ್ಮೆಗೇ ಮೃತಪಟ್ಟಿದ್ದು, ಆಕೆಯ ಪತಿ ಮನೆಯವರು ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ದರ್ಶನ್‌ ಹೇಳಿದ್ದ. ಇದರಿಂದ ಅನುಮಾನಗೊಂಡ ತಾಯಿ ಮನೆಯವರು ಅಂತ್ಯಕ್ರಿಯೆಯನ್ನು ತಡೆದು ತನಿಖೆಗೆ ಒತ್ತಾಯಿಸಿದ್ದರು. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಶ್ವೇತಾಳ ಮರಣೋತ್ತರ ಪರೀಕ್ಷೆ ನಡೆದಾಗ ಮೃತದೇಹದಲ್ಲಿ ವಿಷದ ಅಂಶ ಪತ್ತೆಯಾಗಿತ್ತು. ಹೀಗಾಗಿ ಇದು ಇಂಜೆಕ್ಷನ್‌ ಮೂಲಕ ವಿಷ ನೀಡಿ ಮಾಡಿದ ಕೊಲೆ ಎನ್ನುವುದು ಮೊದಲ ನೋಟಕ್ಕೆ ಬಯಲಾಗಿತ್ತು. ಆದರೆ, ಪೊಲೀಸರ ವಿಚಾರಣೆಯ ವೇಳೆ ಕಂಡುಬಂದ ಸತ್ಯವೇ ಬೇರೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ

ದರ್ಶನ್‌ ಮತ್ತು ಶ್ವೇತಾ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೇ ಅವರು ಮದುವೆಯಾಗಿ ಸುಮಾರು ಎರಡು ವರ್ಷ ಮನೆಯಿಂದಲೇ ದೂರವಿದ್ದರು. ಕೆಲವು ವರ್ಷಗಳಿಂದ ಎಲ್ಲವೂ ಇತ್ಯರ್ಥವಾಗಿ ಕೌಟುಂಬಿಕ ಸಂಬಂಧ ಸರಿಯಾಗಿತ್ತು.

ದರ್ಶನ್‌ ಮತ್ತು ಶ್ವೇತಾ ಸೇರಿ ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಟ್ರೂ ಮೆಡಿಕ್ಸ್ ಲ್ಯಾಬ್ ನಡೆಸುತ್ತಿದ್ದರು. ಈ ನಡುವೆ ಮದುವೆಯಾಗಿ ಒಂದು ಮಗುವನ್ನು ಪಡೆದ ಬಳಿಕ ಗಂಡನಿಂದ ಬೇರಾದ ಸಹೋದ್ಯೋಗಿ ಮಹಿಳೆಯೊಬ್ಬಳ ಜತೆಗೆ ದರ್ಶನ್‌ ಅನೈತಿಕ ಸಂಬಂಧ ಶುರು ಮಾಡಿದ್ದ. ಕಷ್ಟಕ್ಕೆ ಸ್ಪಂದಿಸುವ ಹೆಸರಿನಲ್ಲಿ ಸಂಧಿಸಿದ ಅವರಿಬ್ಬರು ಅನೈತಿಕ ಸಂಬಂಧವನ್ನು ಮುಂದುವರಿಸಿದ್ದರು. ಪ್ರೀತಿಸಿ ಮದುವೆ ಆಗಿದ್ದ ಶ್ವೇತಾಳನ್ನೇ ಯಾಮಾರಿಸಿ ವಿವಾಹಿತೆಯ ಮೋಹಕ್ಕೆ ಸಿಲುಕಿದ್ದ ದರ್ಶನ್‌

ಈ ವಿಷಯ ತಿಳಿದ ಶ್ವೇತಾ, ಪತಿ ದರ್ಶನ್‌ನಿಂದ ಆದ ಮೋಸಕ್ಕೆ ನೊಂದಿದ್ದಳು. ದರ್ಶನ್‌ನನ್ನು ಕೇಳಿದಾಗ ಆತ ಈ ಸಂಬಂಧವನ್ನು ಕೊನೆಗೊಳಿಸುವುದಾಗಿ ಮಾತು ಕೊಟ್ಟಿದ್ದ. ಆದರೆ, ಪದೇಪದೆ ವಿವಾಹಿತೆಯೊಂದಿಗೆ ಮಾತಾಡುವುದು, ಮಸೇಜ್‌ ಮಾಡುವುದು, ಹೊರಗೆ ಸುತ್ತಾಡುವುದು ಶ್ವೇತಾಕ್ಕೆ ಗೊತ್ತಾಗಿತ್ತು. ಕೊನೆಗೆ ಒಂದು ದಿನ ಶ್ವೇತಾ, ದರ್ಶನ್‌ ಹಾಗೂ ಅನೈತಿಕ ಸಂಬಂಧ ಹೊಂದಿದ್ದ ಅಶ್ವಿನಿಯನ್ನು ಮನೆಗೆ ಕರೆಸಿ ಬುದ್ಧಿ ಮಾತನ್ನು ಹೇಳಿ ದೂರ ಇರುವಂತೆ ಹೇಳಿದ್ದಳು. ಆದರೆ, ಕಳೆದ ಸೋಮವಾರ ಅಶ್ವಿನಿ ಮತ್ತೆ ದರ್ಶನ್‌ ಜತೆ ಸಂಪರ್ಕ ಮಾಡಿದ್ದನ್ನು ಕಂಡು ಶ್ವೇತಾ ಬೇಜಾರು ಮಾಡಿಕೊಂಡಿದ್ದಳು ಮತ್ತು ಅಶ್ವಿನಿಗೆ ಕರೆ ಮಾಡಿ ಎಚ್ಚರಿಸಿದ್ದಳು. ಆಕೆ ಸಂಪರ್ಕ ಮಾಡಿದ್ದಕ್ಕೆ ಕಾರಣಗಳನ್ನು ಹೇಳಿ ತಾನು ಯಾವ ಕಾರಣಕ್ಕೂ ಸಂಬಂಧ ಮುಂದುವರಿಸುವುದಿಲ್ಲ ಎಂದಿದ್ದಳು.

ಆದರೆ, ಅದೇ ರಾತ್ರಿ ಇಲ್ಲಿ ದೇವವೃಂದ ಗ್ರಾಮದಲ್ಲಿ ದರ್ಶನ್‌ ತನ್ನ ಪತ್ನಿಯ ಕೊಲೆಗೆ ಸ್ಕೆಚ್‌ ಹಾಕಿದ್ದ. ಅಕ್ರಮ ಸಂಬಂಧದ ಹೆಸರಿನಲ್ಲಿ ತನ್ನ ಮಾನ ತೆಗೆದಿದ್ದಾಳೆ ಎಂಬ ಸಿಟ್ಟು, ಗೆಳತಿಯನ್ನು ದೂರ ಮಾಡಿದ ಆಕ್ರೋಶದಲ್ಲಿದ್ದ ಆತ ಊರಿನ ಮನೆಯಲ್ಲೇ ಕೊಲೆ ಮಾಡಲು ಪ್ಲ್ಯಾನ್‌ ಮಾಡಿದ್ದ.

ಅವನ ಪ್ಲ್ಯಾನ್‌ನಂತೆಯೇ ಶ್ವೇತಾ ಮಂಗಳವಾರ ಬೆಳಗ್ಗೆ ಸತ್ತು ಬಿದ್ದಿದ್ದಳು. ಬೆಳಗ್ಗೆ ಎದ್ದವನೇ ಅಯ್ಯೋ ಶ್ವೇತಾಳಿಗೆ ಹೃದಯಾಘಾತವಾಗಿದೆ ಎಂದು ನಾಟಕವಾಡಿದ. ಶ್ವೇತಾಳ ಮನೆಯವರಿಗೂ ಕರೆ ಮಾಡಿ ತಿಳಿಸಿದ. ಅವರೆಲ್ಲರೂ ಬಂದು ನೋಡಿದಾಗ ಅಷ್ಟು ಹೊತ್ತಿಗೆ ಅಂತ್ಯಕ್ರಿಯೆ ಎಲ್ಲ ಸಿದ್ಧತೆಗಳು ನಡೆದಿದ್ದವು.

ಅಲ್ಲಿ ದರ್ಶನ್‌ನ ಅವಸರ ಮತ್ತು ಸಂಶಯಾಸ್ಪದ ನಡೆ ತಾಯಿ ಮನೆಯವರಿಗೆ ಸಂಶಯ ಮೂಡಿಸಿತು. ಅವರು ಇದರ ಬಗ್ಗೆ ತನಿಖೆಯಾಗಿ ನಂತರ ಅಂತ್ಯಕ್ರಿಯೆ ನಡೆಸೋಣ ಎಂದು ಹೇಳಿದರು. ಹಾಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು. ಮರಣೋತ್ತರ ಪರೀಕ್ಷೆ ವೇಳೆ ಸಾವು ಸಂಭವಿಸಿದ್ದು ಹೃದಯಾಘಾತದಿಂದಲ್ಲ, ವಿಷದಿಂದ ಎನ್ನುವುದು ಗೊತ್ತಾಯಿತು. ಇದರೊಂದಿಗೆ ದರ್ಶನ್‌ ಕೊಲೆ ಮಾಡಿದ್ದಕ್ಕೆ ಮೊದಲ ಸಾಕ್ಷ್ಯ ಸಿಕ್ಕಿತ್ತು.

ಈ ನಡುವೆ, ಪೊಲೀಸರು ದರ್ಶನ್‌ನ ವಿಚಾರಣೆ ನಡೆಸಿದಾಗ ಇನ್ನಷ್ಟು ಸತ್ಯಗಳು ಬಯಲಾದವು.

Related Articles

Back to top button
error: Content is protected !!