ಆರ್ಥಿಕ

ನೌಕರರಿಗೆ ನೂತನ ಕೇಂದ್ರ ಹಣಕಾಸು ಬಜೆಟ್ 2023 ರ ಪ್ರಭಾವ

Views: 0

             ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಬುಧವಾರ 1 ಫೆಬ್ರವರಿ 2023 ರಂದು 2023 ರ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ತೆರಿಗೆದಾರರು ಮತ್ತು ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಹಣಕಾಸು ಸಚಿವರು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆ ಹಂತಗಳಲ್ಲಿ ಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದರು.
ವೈಯಕ್ತಿಕ ಆದಾಯ ತೆರಿಗೆಯ ರಿಯಾಯಿತಿ ಮಿತಿಯನ್ನು ಪ್ರಸ್ತುತ 5 ಲಕ್ಷ ರೂ.ನಿಂದ 7 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಹೀಗಾಗಿ ರೂ. 7 ಲಕ್ಷದವರೆಗೆ ಆದಾಯ ಗಳಿಸುವವರು ತೆರಿಗೆ ನೀಡುವ ಅಗತ್ಯವಿರುವುದಿಲ್ಲ. ರೂ 50,000 ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಯೋಜನವನ್ನು ಹೊಸ ತೆರಿಗೆ ಪದ್ದತಿಗೆ ವಿಸ್ತರಿಸುವ ಪ್ರಸ್ತಾವನೆ.
ಹೊಸ ತೆರಿಗೆ ಪದ್ಧತಿಯಲ್ಲಿ ಸರ್ಚಾರ್ಜ್ ದರವನ್ನು 37% ರಿಂದ 25% ಕ್ಕೆ ಕಡಿಮೆ ಮಾಡಲಾಗಿಡೇ. ಅದೇ ರೀತಿ ಸರ್ಕಾರೇತರ ವೇತನದಾರರ ನಿವೃತ್ತಿಯ ಮೇಲೆ ರಜೆ ನಗದೀಕರಣದ ಮೇಲಿನ ತೆರಿಗೆ ವಿನಾಯಿತಿಯ ಮಿತಿಯನ್ನು ರೂ.25 ಲಕ್ಷಕ್ಕೆ ಹೆಚ್ಚಿಸುವುದು ಸಹಿತ ನೂತನ ಪ್ರಸ್ತಾವನೆಯಲ್ಲಿ ಸೇರಿದೆ.
ಹೊಸ ಆದಾಯ ತೆರಿಗೆ ಪದ್ಧತಿಯನ್ನು ಪ್ರಥಮ ಆಯ್ಕೆಯ ತೆರಿಗೆ ಪದ್ಧತಿಯನ್ನಾಗಿ ಮಾಡಲಾಗುವುದು. ಆದಾಗ್ಯೂ, ಹಳೆಯ ತೆರಿಗೆ ಪದ್ಧತಿಯ ಪ್ರಯೋಜನವನ್ನು ಪಡೆಯುವ ಆಯ್ಕೆಯನ್ನು ನಾಗರಿಕರು ಮುಂದುವರಿಸಾಲು ಅವಕಾಶವನ್ನು ನೀಡಲಾಗಿದೆ.
                                                                                                                                                          -ಡಾ. ಶಿವಪ್ರಸಾದ್

Related Articles

Back to top button
error: Content is protected !!