ಇತರೆ

ಕಾರಿಗೆ ಫುಲ್ ಟ್ಯಾಂಕ್ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾದ ಯುವಕರು! 

Views: 63

ಕನ್ನಡ ಕರಾವಳಿ ಸುದ್ದಿ :ಕಾರಿಗೆ ಫುಲ್ ಟ್ಯಾಂಕ್ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಶಂಕರಪುರದ ಸುಭಾಷ್ ನಗರದಲ್ಲಿ ನಡೆದಿದೆ.

ಬಿಳಿ ಬಣ್ಣದ ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಪೆಟ್ರೋಲ್‌ ಬಂಕ್‌ಗೆ ಬಂದ ಖದೀಮರ ತಂಡ ರಾತ್ರಿ 9.20ರ ವೇಳೆಗೆ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್‌ಗೆ ಕಾರಿನಲ್ಲಿ ಬಂದ ಖದೀಮರು ಫುಲ್ ಟ್ಯಾಂಕ್ ಡಿಸೇಲ್ ಹಾಕಲು ಹೇಳಿದ್ದಾರೆ. ಟ್ಯಾಂಕ್ ಭರ್ತಿ ಆದಾಗ ಸಿಬ್ಬಂದಿ ಬಳಿ ಬಿಲ್ ಕೇಳಿದ್ದಾರೆ. ಒಟ್ಟು 4,711.09 ರೂ. ಬಿಲ್ ಆಗಿದ್ದು, ಸಿಬ್ಬಂದಿ ಬಿಲ್ ತಯಾರಿಸುತ್ತಿದ್ದಂತೆ ಕಾರಿನವರು ಎಸ್ಕೆಪ್ ಆಗಿದ್ದಾರೆ.

ಟಿಂಟ್ ಗ್ಲಾಸ್ ಅಳವಡಿಸಲಾಗಿದ್ದ ಕಾರಿನೊಳಗೆ ಮೂವರು ಯುವಕರಿದ್ದು, ತುಳು ಭಾಷೆ ಸರಾಗವಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ. ತಾವು ಕುಮಟಾದವರು ಎಂದು ಹೇಳಿದ್ದರೂ ಅದು ಸುಳ್ಳಾಗಿರಬಹುದು ಅಲ್ಲದೆ ಯುವಕರು ಮದ್ಯಪಾನ ಮಾಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಕಾರಿನೊಳಗೆ ಬಿಯರ್‌ಬಾಟಲಿ ಹಾಗೂ ಚಿಪ್ಸ್ ಇದ್ದುದಾಗಿ ಪಂಪ್ ನ ಸಿಬಂದಿ ತಿಳಿಸಿದ್ದಾರೆ. ಘಟನೆಯ ಕುರಿತು ಪೆಟ್ರೋಲ್ ಬಂಕ್ ಸಿಬಂದಿ ಶಿರ್ವ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 

Related Articles

Back to top button
error: Content is protected !!