ಆರ್ಥಿಕ

ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗುತ್ತಿದೆಯೇ…ಪರಿಶೀಲಿಸುವುದು ಹೇಗೆ?

Views: 35

ಕನ್ನಡ ಕರಾವಳಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು, ನಿಮ್ಮ ಅತ್ಯಂತ ಪ್ರಮುಖ ದಾಖಲೆಯಾದ ಪ್ಯಾನ್ ಕಾರ್ಡ್ (PAN Card) ಈಗ ಕಿಡಿಗೇಡಿಗಳ ಕೈಗೆ ಸಿಲುಕುವ ಅಪಾಯವಿದೆ. ನಿಮ್ಮ ಗಮನಕ್ಕೆ ಬಾರದೆಯೇ ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿ ಬೇರೆಯವರು ಬ್ಯಾಂಕ್ ಖಾತೆ ತೆರೆಯುವ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ನೀವು ಎಚ್ಚರವಹಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ.

ಪ್ಯಾನ್ ಕಾರ್ಡ್ ದುರ್ಬಳಕೆ ಹೇಗೆ?

ಬ್ಯಾಂಕ್ ಖಾತೆಯ ಪ್ರತಿಯೊಂದು ವಹಿವಾಟು ಕೂಡ ಪ್ಯಾನ್ ಕಾರ್ಡ್‌ಗೆ ಲಿಂಕ್‌ ಆಗಿರುತ್ತದೆ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಬೇರೆಯವರು ಖಾತೆ ತೆರೆದರೆ, ಆ ಖಾತೆಯಲ್ಲಿ ನಡೆಯುವ ಎಲ್ಲಾ ಹಣಕಾಸಿನ ವಹಿವಾಟುಗಳು ನಿಮ್ಮ ಹೆಸರಿನಲ್ಲೇ ದಾಖಲಾಗುತ್ತವೆ. ಇದರ ಪರಿಣಾಮಗಳು ಹೀಗಿವೆ.

ಅಪರಿಚಿತ ಖಾತೆಯಲ್ಲಿ ದೊಡ್ಡ ಮೊತ್ತದ ಹಣದ ಚಲಾವಣೆಯಾದರೆ, ಅದಕ್ಕೆ ನೀವೇ ಆದಾಯ ತೆರಿಗೆ ಇಲಾಖೆಗೆ (Income Tax) ಉತ್ತರಿಸಬೇಕಾಗುತ್ತದೆ. ನಿಮ್ಮ ಆದಾಯಕ್ಕಿಂತ ಹೆಚ್ಚು ಹಣ ನಿಮ್ಮ ಪ್ಯಾನ್‌ ಕಾರ್ಡ್‌ನಲ್ಲಿ ಕಂಡುಬಂದರೆ ತೆರಿಗೆ ನೋಟಿಸ್ ಬರುವ ಸಾಧ್ಯತೆ ಇರುತ್ತದೆ.

ನಿಮ್ಮ ಹೆಸರಿನಲ್ಲಿರುವ ಅಕ್ರಮ ಖಾತೆಯನ್ನು ಬಳಸಿ ಯಾರಾದರೂ ಸೈಬರ್ ಕ್ರೈಂ ಅಥವಾ ಹವಾಲಾ ದಂಧೆಯಂತಹ ಕಾನೂನು ಬಾಹಿರ ಕೃತ್ಯ ಎಸಗಿದರೆ, ಕಾನೂನಿನ ದೃಷ್ಟಿಯಲ್ಲಿ ನೀವೇ ಅಪರಾಧಿಯಾಗುತ್ತೀರಿ.

ಪರಿಶೀಲಿಸುವುದು ಹೇಗೆ?

ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗುತ್ತಿದೆಯೇ ಎಂದು ತಿಳಿಯಲು ನಿಮ್ಮ ಸಿಬಿಲ್ (CIBIL) ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸಿ. ಅಲ್ಲಿ ನಿಮ್ಮ ಹೆಸರಿನಲ್ಲಿರುವ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ವಿವರಗಳು ಕಾಣಿಸುತ್ತವೆ. ಯಾವುದಾದರೂ ಅನುಮಾನಾಸ್ಪದ ಸಾಲ ಅಥವಾ ಖಾತೆ ಕಂಡುಬಂದಲ್ಲಿ ಕೂಡಲೇ ಬ್ಯಾಂಕ್ ಅಥವಾ ಸೈಬ‌ರ್ ಪೊಲೀಸರಿಗೆ ದೂರು ನೀಡಿ..

ನಿಮ್ಮ ಪ್ಯಾನ್ ಕಾರ್ಡ್ ಫೋಟೋ ಅಥವಾ ಸಂಖ್ಯೆಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ

ಸೈಬರ್ ಕೆಫೆ ಅಥವಾ ಫೋಟೋಕಾಪಿ ಅಂಗಡಿಗಳಲ್ಲಿ ನಿಮ್ಮ ದಾಖಲೆಗಳನ್ನು ಮರೆತು ಬಿಟ್ಟು ಬರಬೇಡಿ

ಅನಗತ್ಯ ಆಪ್‌ಗಳಿಗೆ ನಿಮ್ಮ ಪ್ಯಾನ್ ವಿವರಗಳನ್ನು ನೀಡಬೇಡಿ

ಕೇವಲ ಒಂದು ಸಣ್ಣ ನಿರ್ಲಕ್ಷ್ಯ ನಿಮ್ಮನ್ನು ದೊಡ್ಡ ಅನಾಹುತಕ್ಕೆ ತಳ್ಳಬಹುದು. ಇಂದೇ ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಪರಿಶೀಲಿಸಿಕೊಳ್ಳಿ

Related Articles

Back to top button
error: Content is protected !!