ಜನಮನ
ನಿರ್ಮಾಣ ಹಂತದ ಕಟ್ಟಡದಲ್ಲಿ ವಿದ್ಯುತ್ ಅವಘಡ ಮೂವರು ಸಾವು

Views: 0
ರಾಮದುರ್ಗ ತಾಲೂಕಿನ ಹರಿಬೆಂಚಿ ತಾಂಡಾದಿಂದ ಬೆಳಗಾವಿ ನಗರಕ್ಕೆ ಬಂದಿದ್ದ ಅಜ್ಜ, ಅಜ್ಜಿ,ಮೊಮ್ಮಗಳು ಕರೆಂಟ್ ಶಾಕ್ ಗೆ ಬಲಿಯಾಗಿದ್ದಾರೆ.
ಇಂದು ಬೆಳಿಗ್ಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ನೀರು ಹಾಯಿಸುವ ವೇಳೆ ವಿದ್ಯುತ್ ಅವಘಡ ದಿಂದ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.
ಅವಘಡದಲ್ಲಿ ಪ್ರಾಣ ಕಳೆದುಕೊಂಡವರು ಈಶ್ವರಪ್ಪ ಲಮಾಣಿ (50 )ಶಾಂತವ್ವ ಲಮಾಣಿ (45)ಅನ್ನಪೂರ್ಣ( 8) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಬೆಳಗಾವಿ ಠಾಣೆಯ ಪೊಲೀಸರು ಅವಘಡ ನಡೆದ ಕಟ್ಟಡದಲ್ಲಿನ ವಿದ್ಯುತ್ ಸ್ಥಗಿತಗೊಳಿಸಿ ಮೂವರ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಸುದ್ದಿ ತಿಳಿದ ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಮತ್ತು ಪರಿಹಾರ ನೀಡುವ ಭರವಸೆ ನೀಡಿದರು.






