ಇತರೆ

ನಿದ್ದೆಯಲ್ಲಿದ್ದ 3 ವರ್ಷದ ಬಾಲಕನನ್ನು ಸಾಯಿಸಿದ ನಾಗರಹಾವು

Views: 175

ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿ 3 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ದೀಕ್ಷಿತ್ (3) ಮೃತ ದುರ್ದೈವಿ.

ಮಾಲತಿ-ಸುರೇಶ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಕಾಂಪೌಂಡ್‌ನ ಮುಂದೆ ಮಲಗಿದ್ದಾಗ ನಾಗರಹಾವು ಕಚ್ಚಿದೆ. ಕೂಡಲೇ ಅಸ್ವಸ್ಥಗೊಂಡಿದ್ದ ದೀಕ್ಷಿತ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಅಷ್ಟರಲ್ಲಿ ಯೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

Related Articles

Back to top button
error: Content is protected !!