ಇತರೆ
ನಾವುಂದ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Views: 179
ನಾವುಂದ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಾವುಂದದಲ್ಲಿ ಸಂಭವಿಸಿದೆ.
ಗಂಗೊಳ್ಳಿ ನಾಯಕವಾಡಿ ನಿವಾಸಿ ಸಂದೀಪ್ (40) ಮೃತಪಟ್ಟವರು.
ಅವಿವಾಹಿತರಾಗಿರುವ ಅವರು ವಾಹನಗಳ ಪೈಂಟಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದರು. ವಾಹನಗಳ ಚೇಸಿಗೆ ಪೈಂಟಿಂಗ್ ಮಾಡುವ ವೇಳೆ ಶುಕ್ರವಾರ
ಪೈಂಟಿಂಗ್ ಮಾಡೋ ಕಂಪ್ರಷರ್ ಮೆಷಿನ್ ಕೈ ಕೊಟ್ಟಿತ್ತು. ಬಳಿಕ ದುರಸ್ತಿ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದರು. ಮಿಷನ್ನೊಂದಿಗೆ ಬಂದಿದ್ದ ಅವರು ವಿದ್ಯುತ್ ಇಲ್ಲದೆ ಇರುವುದರಿಂದ ವಾಪಸ್ ಹೋಗಿದ್ದರು.
ಮಧ್ಯಾಹ್ನ ಕೆಲಸ ಮಾಡಲು ಕಂಪ್ರಷರ್ ಮಷಿನ್ಗೆ ವಯರ್ ಅಳವಡಿಸಿಕೊಂಡು ಕೆಲಸ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಅವರು ಮಿಷನ್ ಎಳೆದುಕೊಂಡು ಬರುತ್ತಿರುವಾಗ ವಿದ್ಯುತ್ ಶಾಕ್ ತಗಲಿತ್ತು. ಈ ಸಂದರ್ಭ ಹೊರಗಡೆ ಇಬ್ಬರು ವಾಹನ ಚಾಲಕರು ಸಂದೀಪ್ ಹೊರಗೆ ಬಾರದಿದ್ದನ್ನು ನೋಡಲು ಹೋದಾಗ ಅವಘಡ ಸಂಭವಿಸಿರುವುದು ಬೆಳಕಿಗೆ ಬಂದಿದೆ.






