ನಾಳೆ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಉಚಿತ ಲೋಕ ಅದಾಲತ್

Views: 0
ಬೆಂಗಳೂರು: ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಡಿಸೆಂಬರ್ 9 ಅಂದ್ರೆ ಇದೇ ಶನಿವಾರದಂದು ಬೃಹತ್ ಲೋಕಾ ಅದಾಲತ್ ನಡೆಯುತ್ತಿದೆ. ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಈ ಲೋಕ್ ಅದಾಲತ್ ನಡೆಯಲಿದ್ದು, ಟ್ರಾಫಿಕ್ ಫೈನ್ಸ್, ದಾಂಪತ್ಯ ಕಲಹ, ಭೂ ಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಲೋಕ ಅದಾಲತ್‌ನಲ್ಲಿ ಎಡಿಆರ್ ಸೆಕ್ಷನ್ 89 ರ ಅಡಿಯಲ್ಲಿ ನಡೆಯುವ ವ್ಯಾಜ್ಯಗಳ ಇತ್ಯರ್ಥ ಮಾಡಿಕೊಳ್ಳಬಹುದು. ಅಧ್ಯಕ್ಷರಾದ ಜಸ್ಟೀಸ್ ಪಿ.ಎಸ್ ದಿನೇಶ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇದೇ ಶನಿವಾರ ಲೋಕ ಅದಾಲತ್ ಇದ್ದು, ರಾಜ್ಯದ ಜನರಲ್ಲಿ ಅವರ ವ್ಯಾಜ್ಯಗಳ ಇತ್ಯರ್ಥ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಲೋಕ ಅದಾಲತ್‌ನಲ್ಲಿ ಚೆಕ್ ಬೌನ್ಸ್, ಮಿಡಿಯೇಷನ್ ಕೇಸ್, ಬ್ಯಾಂಕ್ ಕೇಸ್, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ ಕೇಸ್, ಲೇಬರ್ ಲಿಟಿಗೇಷನ್, ವಿದ್ಯುತ್ & ವಾಟರ್ ಬಿಲ್ ಕೇಸ್, ಫ್ಯಾಮಿಲಿ ಡಿಸ್ಪ್ಯೂಟ್, ಸ್ಯಾಲರಿ ಕಿರಿಕಿರಿ, ಭೂ ಸ್ವಾಧೀನ ಕೇಸ್, ಸಿವಿಲ್ & ಕಮರ್ಷಿಯಲ್ ಕೇಸ್ ಸೇರಿದಂತೆ ವಿವಿಧ ಬಗೆಯ ಕೇಸ್‌ಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.
ಈ ಬಾರಿಯ ಅದಾಲತ್‌ನಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಲಕ್ಷಾಂತರ ಪ್ರಕರಣಗಳ ಇತ್ಯರ್ಥಕ್ಕೆ ಯೋಜನೆ ಮಾಡಿದೆ. ಈಗಾಗಲೇ 24 ಲಕ್ಷ ಕೇಸ್‌ಗಳನ್ನ ಇತ್ಯರ್ಥ ಮಾಡಲಾಗಿದ್ದು, ಡಿಸೆಂಬರ್ 9ರಂದು ನಡೆಯುವ ಮೆಗಾ ಅದಾಲತ್‌ನಲ್ಲಿ 2.60 ಲಕ್ಷ ಕೇಸ್‌ಗಳ ಇತ್ಯರ್ಥಕ್ಕೆ ಪ್ಲಾನ್ ಮಾಡಲಾಗಿದೆ. ಸಾರ್ವಜನಿಕರು ಯಾರು ಬೇಕಾದ್ರೂ ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.






