ಧಾರ್ಮಿಕ
ನಾಗರ ಪಂಚಮಿ: ಜೀವಂತ ನಾಗರಾಜನಿಗೆ ಪೂಜೆ

Views: 0
ನಾಗರ ಪಂಚಮಿ ದಿನದಂದು ನಾಗನ ಕಲ್ಲಿಗೆ ಪೂಜಿ ಸಲ್ಲಿಸುತ್ತಾರೆ. ಆದರೆ ಕಾಪು ಮಜೂರಿನಲ್ಲಿ ನಾಗರಪಂಚಮಿಯ ಪ್ರಯುಕ್ತ ಜೀವಂತ ನಾಗರ ಹಾವಿಗೆ ಜಲಾಭಿಷೇಕ ಮತ್ತು ಆರತಿ ಎತ್ತಿ ಪೂಜೆ ಸಲ್ಲಿಸಿ, ನಾಗರ ಪಂಚಮಿಯನ್ನು ಆಚರಣೆ ಮಾಡಿದ್ದಾರೆ.
ಮಜೂರಿನ ಉರಗ ತಜ್ಞ ಗೋವರ್ಧನ ಭಟ್ ಅವರು ಗಾಯಗೊಂಡ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಹವ್ಯಾಸವನ್ನು ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆ ರಿಕ್ಷಾ ಅಡಿಗೆ ಬಿದ್ದ ನಾಗರ ಹಾವನ್ನು ರಕ್ಷಿಸಿ ಶುಶ್ರೂಷೆ ನೀಡುತ್ತಿದ್ದಾರೆ. ಮತ್ತೊಂದು ನಾಗರಹಾವು ನಾಯಿ ಕಚ್ಚಿ ಗಾಯಗೊಳಿಸಿತ್ತು. ಎರಡು ನಾಗರ ಹಾವುಗಳಿಗೆ ಗೋವರ್ಧನ ಭಟ್ ಅವರು ಶುಶ್ರೂಷೆ ನೀಡುತ್ತಿದ್ದಾರೆ.
ಜೀವಂತ ಹಾವುಗಳಿಗೆ ಇಂದು ಜಲಾಭಿಷೇಕ ನೆರವೇರಿಸಿ ಆರತಿ ಎತ್ತಿ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಗೋವರ್ಧನ ಭಟ್ ಕುಟುಂಬದವರು ಉಪಸ್ಥಿತರಿದ್ದರು.






