ನಡುರಸ್ತೆಯಲ್ಲೇ ವಿದ್ಯಾರ್ಥಿಗೆ ದುಷ್ಕರ್ಮಿಗಳಿಂದ ಚಾಕು ಇರಿತ
Views: 27
ಕನ್ನಡ ಕರಾವಳಿ ಸುದ್ದಿ: ನಗರದಲ್ಲಿ ವಾಹನ ಸವಾರರ ಅತಿರೇಕದ ವರ್ತನೆ ಮತ್ತು ಆಕ್ರೋಶ ಮತ್ತೊಂದು ಭೀಕರ ಘಟನೆಗೆ ಕಾರಣವಾಗಿದೆ. ರಸ್ತೆ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಸಂಚಾರ ವಿವಾದ ವೊಂದು ವಿಕೋಪಕ್ಕೆ ತಿರುಗಿ, ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ರಾಜಧಾನಿಯಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಓದುತ್ತಿರುವ 17 ವರ್ಷದ ಯುವಕನ ಮೇಲೆ ದುಷ್ಕರ್ಮಿ ಗಳು ನಡುರಸ್ತೆಯಲ್ಲೇ ದಾಳಿ ಮಾಡಿದ್ದಾರೆ. ಪಾರ್ಟ್ ಟೈಮ್ ಬೈಕ್ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿರುವ ಆತ ತನ್ನ ಸ್ನೇಹಿತರೊಂದಿಗೆ ಮಾಮೂಲಿ ಯಾಗಿ ತೆರಳುವ ಜ್ಯೂಸ್ ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ಸವಾರನೊಬ್ಬ ಸೈಡ್ ಕೊಡುವಂತೆ ಹಲವು ಬಾರಿ ಹಾರ್ನ್ ಮಾಡಿದ್ದಾನೆ. ವಿದ್ಯಾರ್ಥಿಯೂ ಜಾಸ್ತಿ ತಲೆ ಕೆಡಿಸಿಕೊಳ್ಳದೆ ದಾರಿ ಬಿಟ್ಟು ಕೊಟ್ಟಿದ್ದಾನೆ.
ಆದರೂ ಸುಮ್ಮನಿರದ ಸವಾರ, ಕಿರುಚಾಡಿ ಜಗಳಕ್ಕಿಳಿದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಅಲ್ಲಿಂದ ಕಾಲ್ಕಿತ್ತ ಸವಾರ ಇನ್ನೋರ್ವ ಬೈಕ್ ಸವಾರನೊಂದಿಗೆ ಬಂದು ವಿದ್ಯಾರ್ಥಿಯ ವಾಹನವನ್ನು ಅಡ್ಡಗ ಟ್ಟಿದ್ದಾನೆ. ಆತನ ಬೈಕ್ ಕೀಲಿಯನ್ನು ಕಸಿದುಕೊಂಡ ಇಬ್ಬರೂ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಸಮೀಪದ ಬಾರ್ ವೊಂದರ బళి ಕರೆದುಕೊಂಡು ಹೋಗಿದ್ದಾರೆ. ಯಾರಿಲ್ಲದ ಸಮಯ ಸಾಧಿಸಿ ವಿದ್ಯಾರ್ಥಿಗೆ ದೊಣ್ಣೆಯಿಂದ ಥಳಿಸಲು ಮುಂದಾಗಿದ್ದಾರೆ. ಈ ವೇಳೆ ವಿದ್ಯಾರ್ಥಿಯ ಸಂಬಂಧಿಕರೊಬ್ಬರು ಮಧ್ಯ ಪ್ರವೇಶಿಸಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.






