ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಶೋಧಕಾರ್ಯ ವೇಳೆ ಅಸ್ಥಿಪಂಜರದ ಬಳಿ ಐಡಿ ಕಾರ್ಡ್ ಪತ್ತೆ..! ವ್ಯಕ್ತಿ ಯಾರು ಗೊತ್ತೆ?

Views: 201
ಕನ್ನಡ ಕರಾವಳಿ ಸುದ್ದಿ:ಎಸ್ ಐಟಿ ಅಧಿಕಾರಿಗಳು ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಶೋಧಕಾರ್ಯ ನಡೆಸಿದ್ದು ಈ ವೇಳೆ ಅಸ್ಥಿಪಂಜರದ ಬಳಿ ಐಡಿ ಕಾರ್ಡ್ ಪತ್ತೆಯಾಗಿತ್ತು. ಇದೀಗ ಐಡಿ ಕಾರ್ಡ್ ನಲ್ಲಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಸೌಜನ್ಯ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡದ ರಹಸ್ಯ ಬೇಧಿಸುತ್ತಿರುವ ಎಸ್ ಐಟಿ ಅಧಿಕಾರಿಗಳು ಬಂಗ್ಲಗುಡ್ದದಲ್ಲಿ ಮಹಜರು ನಡೆಸುತ್ತಿದ್ದಾರೆ.
ಈವರೆಗೆ ಐದು ಕಡೆಗಳಲ್ಲಿ ಐದು ಬುರುಡೆ, ಅಸ್ಥಿಪಂಜರಗಳು, ಹಗ್ಗ, ಸಾರಿ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದೆ. ಅದರಲ್ಲಿ ಒಂದು ಸ್ಥಳದಲ್ಲಿ ಅಸ್ಥಿಪಂಜರ, ಬುರುಡೆ ಹಾಗೂ ಅದರ ಬಳಿ ಐಡಿ ಕಾರ್ಡ್ ವೊಂದು ಪತ್ತೆಯಾಗಿತ್ತು. ಈ ಐಡಿಕಾರ್ಡ್ ನ ಹಿಂದೆ ಬಿದ್ದ ಎಸ್ ಐಟಿ ಅಧಿಕಾರಿಗಳು ಅದು ಯಾರು? ಮೂಲವೇನು ಎಂಬುದನ್ನು ಕೆದಕಿ ಪತ್ತೆ ಮಾಡಿದ್ದಾರೆ.
ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್ ಯು.ಬಿ.ಅಯ್ಯಪ್ಪ ಎಂಬುವವರದ್ದು. ಯು.ಬಿ.ಅಯ್ಯಪ್ಪ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದವರು. 7 ವರ್ಷಗಳ ಹಿಂದೆ ಯು.ಬಿ ಅಯ್ಯಪ್ಪ ಚಿಕಿತ್ಸೆಗೆಂದು ಮೈಸೂರಿನ ಆಸ್ಪತ್ರೆಗೆ ತೆರಳಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಕುಟ್ಟ ಠಾಣೆಯಲ್ಲಿ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ನಾಪತ್ತೆಯಾಗಿದ್ದ ಯು.ಬಿ.ಅಯ್ಯಪ್ಪ ಅವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಈಗ ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳು ಇಂದು ಬಂಗ್ಲಗುಡ್ಡದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಅಸ್ಥಿಪಂಜರವೊಂದರ ಬಳಿ ಯು.ಬಿ.ಅಯ್ಯಪ್ಪ ಅವರ ಐಡಿ ಕಾರ್ಡ್ ಪತ್ತೆಯಾಗಿದೆ. ಮೈಸೂರಿನಿಂದ ನಾಪತ್ತೆಯಾಗಿದ್ದ ಯು.ಬಿ ಅಯ್ಯಪ್ಪ ಅವರ ಐಡಿ ಕಾರ್ಡ್, ಧರ್ಮಸ್ಥಳದ ಬಂಗ್ಲಗುಡ್ಡ ಕಾಡಿನನೊಳಗೆ ಅಸ್ಥಿಪಂಜರಗಳ ಬಳಿ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ.