ದಾವೂದ್ ಇಬ್ರಾಹಿಂ ಸಾವನ್ನಪ್ಪಿದ್ದಾನೆ, ಭೂಗತ ಪಾತಕಿ ಸಾವಿನ ಬಗ್ಗೆ ವೈರಲ್ ಆಗುತ್ತಿವೆ ಟ್ವೀಟ್!?

Views: 3
ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ವಿಷ ಹಾಕಿ ಕೊಲ್ಲಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೀಗ ಈ ಭೂಗತ ಪಾತಿ ಸಾವನ್ನಪ್ಪಿದ್ದಾನೆ ಎಂಬ ಎಕ್ಸ್ (ಟ್ವೀಟ್) ವೈರಲ್ ಆಗಿದೆ.
ಪೊಲಿಟಿಕಲ್ ಮಸ್ತಿ ಎಂಬ ಟ್ವಿಟ್ಟರ್ ಖಾತೆಯು ಟ್ವೀಟ್ ಮಾಡಿದ್ದು, ಅದರಲ್ಲಿ ಪಾಕ್ ಸರ್ಕಾರ- ಕರಾಚಿ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾವೂದ್ ಇಬ್ರಾಹಿಂ ಸಾವನ್ನಪ್ಪಿದ್ದಾನೆ. ಈ ಟ್ವೀಟ್ ಭಾರೀ ವೈರಲ್ ಆಗಿದೆ.
ಇದಲ್ಲದೆ, ಮತ್ತೊಂದು ಟ್ವೀಟ್ ವೈರಲ್ ಆಗಿದೆ. ಡಾಕ್ಟರ್. ಸೈಯದ್ ರಿಜ್ವಾನ್ ಅಹ್ಮದ್ ಎಂಬ ಟ್ವಿಟ್ಟಿಗ ಕೂಡ ಅನ್ವರ್ ಉಲ್ ಹಕ್ ಕಾಕರ್ ಎಂಬ ಟ್ವಿಟ್ವಿಗ ಬರೆದ ಟ್ವೀಟ್ ಅನ್ನು ರಿಪೋಸ್ಟ್ ಮಾಡಿದ್ದಾರೆ.
ದಾವೂದ್ ಇಬ್ರಾಹಿಂ ಅಪರಿಚಿತರಿಂದ ವಿಷ ಸೇವಿಸಿ ನಿಧನರಾದರು. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾಹು ಅವರಿಗೆ ಜನ್ನತ್ ನಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ ಎಂದು ಬರೆದುಕೊಂಡಿದ್ದಾರೆ.
ಸಹೋದರಿ ಮಗನಿಂದ ಹೊರಬಿತ್ತು ಸತ್ಯ
2ನೇ ಮದುವೆಯಾದ ಬಳಿಕ ದಾವೂದ್ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದು, ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದಾವೂದ್ ಸಹೋದರಿ ಮಗನ ಆತನ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಕಾರಣ ಈ ಸಂಗತಿ ಬೆಳಕಿಗೆ ಬಂದಿದೆ.
ಪಾಕ್ನಲ್ಲಿ ಇಂಟರ್ನೆಟ್ ಸ್ಥಗಿತ
ಸದ್ಯ ಪಾಕಿಸ್ತಾನದಲ್ಲಿ ದಾವೂದ್ ಸಾವನ್ನಪ್ಪಿರುವ ಸುದ್ದಿಯೊಂದು ಹರಿದಾಡುವುದರ ಜೊತೆಗೆ ಇಂಟರ್ನೆಟ್ ಸ್ಥಗಿತಗೊಂಡಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಡಿಸೆಂಬರ್ 17ರಿಂದ ಪಾಕ್ನಲ್ಲಿ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಲಾಗುತ್ತದೆ.






