ಜನಮನ

ದಾಳಿ ನಡೆಸಿ ದೇಹವನ್ನು ಕಾಡಿನಂಚಿಗೆ ಎಳೆದೊಯ್ದು ಅರ್ಧಂಬರ್ಧ ತಿಂದು ಹಾಕಿದ ಹುಲಿ!

Views: 1

ಚಾಮರಾಜನಗರ: ಬಂಡೀಪುರ ವ್ಯಾಪ್ತಿಯ ಹಾಡಿನಕಣಿವೆ ಬಳಿ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿ ದೇಹವನ್ನು ಅರ್ಧಂಬರ್ಧ ತಿಂದು ಹಾಕಿದೆ.

ಹುಲಿ ದಾಳಿಗೆ ಬಲಿಯಾದ ವ್ಯಕ್ತಿಯನ್ನು 50 ವರ್ಷದ ಬಸವ ಎಂದು ಗುರುತಿಸಲಾಗಿದೆ. ಜೇನುಕುರುಬ ಸಮುದಾಯಕ್ಕೆ ಸೇರಿದ ಬಸಪ್ಪನ ಮೇಲೆ ಹುಲಿ ದಾಳಿ ನಡೆಸಿ ದೇಹವನ್ನು ಕಾಡಿನಂಚಿಗೆ ಎಳೆದೊಯ್ದು ತಿಂದು ಹಾಕಿದೆ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಂಡೀಪುರ ಮಂಗಲ ಮಧ್ಯೆ ಈ ಹಾಡಿನಕಣಿವೆ ಗ್ರಾಮವಿದ್ದು, ಹುಲಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

Related Articles

Back to top button
error: Content is protected !!