ದಯಾಮರಣ ಕೊಡಿ ಎಂದ ಸೌಜನ್ಯಾ ಕುಟುಂಬಿಕರ ಆರೋಪಿ ಉದಯ್ ಜೈನ್

Views: 187
ಕನ್ನಡ ಕರಾವಳಿ ಸುದ್ದಿ: ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಉದಯ್ ಜೈನ್ ಅವರು ನಮಗೆ ದಯಾಮರಣ ಕೊಡಿ ಎಂದು ಕೇಳಿದ್ದಾರೆ.
ಸಿಐಡಿ, ಸಿಬಿಐ ತನಿಖೆಯಲ್ಲಿ ಕಳಂಕಮುಕ್ತರಾಗಿದ್ದ ಉದಯ್ ಕುಮಾರ್ ಜೈನ್ ಅವರಿಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ನೋಟಿಸ್ ಹಿನ್ನೆಲೆಯಲ್ಲಿ ಉದಯ್ ಜೈನ್ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು.
ನಮ್ಮ ಬಗ್ಗೆ ಸುಳ್ಳು ಆರೋಪ ಎಂದು ಯಾರೂ ಒಪ್ಪುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಪ್ರಧಾನ ಮಂತ್ರಿ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರಕ್ಕೂ ದಯಾಮರಣಕ್ಕೆ ಪತ್ರ ಬರೆಯುತ್ತೇನೆ ಎಂದು ಉದಯ್ ಜೈನ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತಾಡಿದ ಅವರು ಬುರುಡೆ ಗ್ಯಾಂಗ್ ನವರು ಷಡ್ಯಂತ್ರ ಮಾಡಿ, ಸೌಜನ್ಯ ತಂದೆ ತಾಯಿಯ ದಾರಿತಪ್ಪಿಸಿ , ಸತ್ತು ವರ್ಷ ಆದ ಮೇಲೆ ನಮಗೆ ತೊಂದರೆ ಕೊಟ್ಡಿದ್ದರು. ಹೀಗಾಗಿ ನಮಗೂ ನ್ಯಾಯ ಬೇಕು, ಸೌಜನ್ಯಗೂ ನ್ಯಾಯ ಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲದಿದ್ದರೆ ದಯಾಮರಣ ಕೊಡಿಸಿ ಎಂದು ಸೌಜನ್ಯಾ ಕುಟುಂಬ ಆರೋಪಿಸಿರುವ ಉದಯ್ ಜೈನ್ ಹೇಳಿದ್ದಾರೆ.
ಸೌಜನ್ಯಾ ತಾಯಿಯೇ ಸುಪ್ರೀಂ ಕೋರ್ಟ್ ಗೆ ಹೋಗಲು ತಯಾರಿಲ್ಲ. ಅವರನ್ನು ಹೋಗಲು ಬಿಡುವುದೂ ಇಲ್ಲ. ಬುರುಡೆ ಗ್ಯಾಂಗ್ ನವರು ಬಿಡುವುದಿಲ್ಲ. ಸೌಜನ್ಯ ತಂದೆಯೂ ತೀರಿದ್ದಾರೆ. ಸೌಜನ್ಯ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ್ರೆ, ಅಥವಾ ಬುರುಡೆ ಗ್ಯಾಂಗನವರು ಅವರನ್ನು ಕೊಲೆ ಮಾಡಿದ್ರೆ ನಮಗೆ ನ್ಯಾಯ ಸಿಗುವುದಿಲ್ಲ.
ಸಂತೋಷ್ ರಾವ್ ಅವರನ್ನು ಎಲ್ಲರೂ ಆರೋಪಿ ಎಂದು ಸಾಬೀತು ಮಾಡಿದ್ದರು. ಆತನನ್ನು ಜೈಲಿಗೆ ಹಾಕಿದರೆ ನಮಗೆ ನ್ಯಾಯ ಸಿಗಬಹುದು. ನಮ್ಮ ಮೇಲಿನ ಅಪವಾದ ಹೋಗಬಹುದು. ಆದರೆ ನಮ್ಮನ್ನೆಲ್ಲ ಅಪರಾಧಿ ಎಂಬ ದೃಷ್ಟಿಯಲ್ಲೇ ನೋಡುತ್ತಾರೆ. ಪ್ರತೀ ಕ್ಷಣ ಸಾಯುವುದಕ್ಕಿಂತ ಒಂದೇ ಸಾರಿ ಮರಣ ಸಿಕ್ಕರೆ ಒಳ್ಳೆಯದು. ಹೀಗಾಗಿ ದಯಾಮರಣಕ್ಕೆ ಅರ್ಜಿ ಹಾಕುವ ವ್ಯವಸ್ಥೆಯನ್ನು ಮಾಡುತ್ತಿದ್ದೇನೆ ಎಂದು ಉದಯ್ ಜೈನ್ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.