ಜನಮನ

ತಾಳಿ ಕಟ್ಟುವ ವೇಳೆ ಮದುವೆ ಬೇಡವೆಂದ ವಧು

Views: 12

ಮದುವೆಗೆ ತಾಳಿ ಕಟ್ಟುವ ಸಂದರ್ಭದಲ್ಲಿ ವಧು ನನಗೆ ಮದುವೆ ಬೇಡವೆಂದು ಹಸಮಣೆಯಿಂದ ಹೊರಬಂದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬಂಧು ಬಳಗ ಎಲ್ಲಾ ಸೇರಿ ಕಳೆದ ರಾತ್ರಿಯಿಂದ ಆರತಕ್ಷತೆ, ಮದುವೆಯ ವಿವಿಧ ಶಾಸ್ತ್ರಗಳು ನಡೆದಿತ್ತು. ಭಾನುವಾರ ಬೆಳಿಗ್ಗೆ ಮದುವೆ ಮಂಟಪದಲ್ಲಿ ವರ ವಧುವಿಗೆ ಮಾಂಗಲ್ಯ ಧಾರಣೆ ಮಾಡುವ ವೇಳೆ ನನಗೆ ಮದುವೆ ಬೇಡವೆಂದು ಮದುವೆ ಮಂಟಪದಿಂದ ಹೊರ ನಡೆದಿದ್ದಾರೆ.

ಹಸಮಣೆಯಿಂದ ವಧು ಎದ್ದು ಹೊರ ನಡೆದ ಹಿನ್ನೆಲೆ ಮದುವೆ ಅರ್ಧಕ್ಕೆ ಮುರಿದು ಬಿದ್ದಿದೆ.

ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಹೀಗಾಗಿ ಮದುವೆ ಕ್ಯಾನ್ಸಲ್ ಮಾಡಿದ್ದಾರೆ.

ರಾತ್ರಿ ರಿಸೆಪ್ಶನ್ ನಲ್ಲಿ ಹುಡುಗ ವೆಂಕಟೇಶನೊಂದಿಗೆ ದಿವ್ಯ ನಗುನಗುತ್ತಲೇ ಫೋಟೋಕ್ಕೆ ಪೋಸ್ ಕೊಟ್ಟಿದ್ದಾಳೆ.

ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಮಂಟಪದಲ್ಲಿ ಗದ್ದಲ ಉಂಟಾಗಿ ಎರಡು ಕಡೆಯವರಿಂದ ಮಾತಿನ ಚಕಮಕಿ ನಡೆಯಿತು..

ಹುಡುಗನ ಕಡೆಯಿಂದ ಆಕ್ರೋಶ ವ್ಯಕ್ತವಾಗಿದ್ದು. ಹುಡುಗಿ ಬೇರೆಯವರನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗೊತ್ತಿದ್ದರೂ ಈ ಮದುವೆ ನಿಶ್ಚಯ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Back to top button
error: Content is protected !!