ಇತರೆ

ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಗೆಯೊಂದಿಗೆ ಅಸಭ್ಯ ವರ್ತನೆ ಮತ್ತು ಲೈಂಗಿಕ ಕಿರುಕುಳ: ವಿಮಾನ ನಿಲ್ದಾಣದ ಸಿಬ್ಬಂದಿ ಬಂಧನ

Views: 66

ಕನ್ನಡ ಕರಾವಳಿ ಸುದ್ದಿ: ತಪಾಸಣೆ ನೆಪದಲ್ಲಿ ದಕ್ಷಿಣ ಕೊರಿಯಾದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಜನವರಿ 19ರಂದು ಈ ಘಟನೆ ನಡೆದಿದೆ. ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಫ್ಘಾನ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ : ಜನವರಿ 19ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋರಿಯಾಗೆ ಹೋಗಲು ಬಂದಿದ್ದು, ನಂತರ ಇಮಿಗ್ರೇಷನ್ ತಪಾಸಣೆ ಮುಗಿಸಿ ಹೋಗುವ ಸಮಯದಲ್ಲಿ ವಿಮಾನ ನಿಲ್ದಾಣದ  ಸಿಬ್ಬಂದಿ ಬಂದು ನನ್ನ ವಿಮಾನ ಟಿಕೆಟ್ ಪರಿಶೀಲನೆ ಮಾಡಿದರು. ನಂತರ ನನ್ನ ಚೆಕ್ ಇನ್ ಬ್ಯಾಗೇಜ್ ಕುರಿತು ಸಮಸ್ಯೆ ಇದೆ ಎಂದು ಹೇಳಿ, ಬ್ಯಾಗ್ ತಪಾಸಣೆ ಮಾಡಿ, ಅದರಲ್ಲಿ ಬೀಪ್ ಶಬ್ದ ಬಂದಿದೆ ಎಂದು ತಿಳಿಸಿ, ಮತ್ತೆ ತಪಾಸಣೆಗೆ ಹೋಗುವುದು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮನ್ನು ವೈಯಕ್ತಿಕವಾಗಿ ತಪಾಸಣೆ ಮಾಡಬೇಕು ಎಂದು ಹೇಳಿ ಪುರುಷರ ವಾಶ್‌ ರೂಮ್ ಒಳಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆರೋಪಿಯು ನನ್ನ ಅನುಮತಿ ಪಡೆಯದೇ ನನ್ನ ಎದೆಯ ಭಾಗ ಮತ್ತು ಹಿಂಭಾಗವನ್ನು ಮುಟ್ಟಿದ್ದಾನೆ. ಇದಕ್ಕೆ ನಾನು ಒಪ್ಪದೇ ಇದ್ದಾಗ ಏಕಾಏಕಿ ನನ್ನನ್ನು ಅಪ್ಪಿಕೊಂಡು ಧನ್ಯವಾದಗಳ ಎಂದು ಹೇಳಿ ಕಳುಹಿಸಿ ಕೊಟ್ಟಿದ್ದಾನೆ. ಆರೋಪಿಯು ನನ್ನ ಒಪ್ಪಿಗೆ ಇಲ್ಲದೆ ಲೈಂಗಿಕವಾಗಿ ಸ್ಪರ್ಶಿಸಿದ್ದು, ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಮಹಿಳೆಯು ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!