ಇತರೆ

ಟ್ರ್ಯಾಕ್ಟ‌ರ್ ಸಹಿತ ಬಾವಿಗೆ ಬಿದ್ದು ಯುವಕ ಸಾವು

Views: 58

ಕನ್ನಡ ಕರಾವಳಿ ಸುದ್ದಿ: ಟ್ರ್ಯಾಕ್ಟರ್‌ ತೊಳೆಯುತ್ತಿದ್ದ ವೇಳೆ ಯುವಕನೋರ್ವ ಆಕಸ್ಮಿಕವಾಗಿ ಟ್ರ್ಯಾಕ್ಟ‌ರ್ ಸಹಿತ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟುವಿನಲ್ಲಿ ಮಂಗಳವಾರ (ಅ.21) ಸಂಭವಿಸಿದೆ.

ರಾಜೇಶ್ (38) ಮೃತ ದುರ್ದೈವಿ. ರಾಜೇಶ್ ಅವರು ಟ್ರಾಕ್ಟ‌ರ್ ತೊಳೆಯಲೆಂದು ಚಲಾಯಿಸುತ್ತಿರುವಾಗ, ಅದು ರಿವರ್ಸ್ ಹೋಗಿ ಬಾವಿಯ ಆವರಣ ಗೋಡೆಗೆ ಬಡಿದು ವಾಹನದೊಂದಿಗೆ ನೀರಿಗೆ ಬಿದ್ದ ರಾಜೇಶ್ ಮೃತಪಟ್ಟಿದ್ದಾರೆ.

ರಾಜೇಶ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Related Articles

Back to top button
error: Content is protected !!