ಇತರೆ

ಟ್ರಾನ್ಸ್‌ಫಾರ್ಮರ್ ನಿಂದ ಸಿಡಿದ ಬೆಂಕಿ:ಟಯರ್ ಅಂಗಡಿ ಸಂಪೂರ್ಣ ಭಸ್ಮ, ಲಕ್ಷಾಂತರ ರೂ. ನಷ್ಟ

Views: 41

ಕನ್ನಡ ಕರಾವಳಿ ಸುದ್ದಿ: ಟ್ರಾನ್ಸ್‌ಫಾರ್ಮರ್ ನಿಂದ ಸಿಡಿದ ಬೆಂಕಿಯ ಕಿಡಿಯೊಂದು ಹುಲ್ಲುಗಳಿಗೆ ಬಿದ್ದ ಪರಿಣಾಮ ಟಯ‌ರ್ ಅಂಗಡಿಗೆ ಬೆಂಕಿ ಆವರಿಸಿದ್ದು ಇದರಿಂದ ಟಯರ್ ಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಭಾನುವಾರ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಪ್ಲಾಝಾ ಬಳಿ ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯೊಳಗಿದ್ದ ಕಂಪ್ರೆಸರ್, ಜನರೇಟರ್, ಟೂಲ್ ಕಿಟ್ ಸಹಿತ ಟಯರ್ ಗಳು ಸುಟ್ಟುಹೋಗಿದ್ದು, ಸುಮಾರು 4 ರಿಂದ 5 ಲಕ್ಷ ರೂ.ನಷ್ಟ ಅಂದಾಜಿಸಲಾಗಿದೆ.

ಬಿಹಾರ ಮೂಲದ ಸೈಫುಲ್ಲಾ ಎಂಬಾತ ಸುಮಾರು 10 ವರ್ಷಗಳ ಹಿಂದೆ ಹೆಜಮಾಡಿಗೆ ಬಂದು ಟಯರ್ ಪಂಕ್ಚರ್ ಕೆಲಸ ಮಾಡುತ್ತಾ ತಾನೇ ಸ್ವಂತ ಟಯರ್ ಅಂಗಡಿ ತೆರೆದು ವ್ಯವಹಾರ ನಡೆಸುತ್ತಿದ್ದನು.

ಭಾನುವಾರ ಆಗ್ನಿ ಅವಘಡ ಸಂದರ್ಭ ಅದೇ ಅಂಗಡಿಯೊಳಗಡೆ ಮಲಗಿದ್ದ ಆತನಿಗೆ ತಡವಾಗಿ ಘಟನೆ ಅರಿವಿಗೆ ಬಂದಿತ್ತು. ಎದ್ದು ಹೊರಬರುವಷ್ಟರಲ್ಲಿ ಬೆಂಕಿ ಅಂಗಡಿಯಿಡೀ ವ್ಯಾಪಿಸಿದ್ದು, ಟಯರ್ ಗಳನ್ನೆಲ್ಲಾ ಸುಟ್ಟು ಭಸ್ಮವಾಗಿದೆ. ಬೆಂಕಿ ಮತ್ತಷ್ಟು ಅಪಾಯ ಉಂಟು ಮಾಡುವ ಹಂತದಲ್ಲಿ ಸ್ಥಳೀಯರು ಮತ್ತು ಪಡುಬಿದ್ರಿ ಪೋಲಿಸರು ಬಕೆಟ್ ಬಳಸಿ ಹಾಯಿಸಿ ಬೆಂಕಿ ನಿಯಂತ್ರಿಸಿದ್ದು ಬಳಿಕ ಉಡುಪಿ ಆಗ್ನಿ ಶಾಮಕ ದಳ ಆಗಮಿಸಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತಂದಿದ್ದಾರೆ.

Related Articles

Back to top button
error: Content is protected !!