ರಾಜಕೀಯ

ಟೈಮ್ಸ್‌ ನೌ ಚುನಾವಣಾ ಪೂರ್ವ ಸಮೀಕ್ಷೆ, ಕರ್ನಾಟಕ: ಬಿಜೆಪಿ ದಳ ಮೈತ್ರಿಗೆ 23 ಸ್ಥಾನ, NDA 366, INDIA104 

Views: 66

ಈಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 366 ಸ್ಥಾನ ಗಳಿಸಿದರೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ 23 ಸ್ಥಾನ ಗೆಲ್ಲಲಿದೆ ಎಂದು ಟೈಮ್ಸ್‌ ನೌ ಸಮೀಕ್ಷೆ ತಿಳಿಸಿದೆ.

ರಾಜ್ಯದಲ್ಲಿ ಬಿಜೆಪಿ 21, ದಳ 2 ಸ್ಥಾನ ಗೆದ್ದುಕೊಂಡರೆ ಕಾಂಗ್ರೆಸ್‌ 5 ಸ್ಥಾನಗಳನ್ನು ಗಳಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಮತಗಳ ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿ 46.2% ಕಾಂಗ್ರೆಸ್‌ 42.3% ಜೆಡಿಎಸ್‌ 8.4% ಹಾಗೂ ಇತರ ಪಕ್ಷಗಳು 3.1%ರಷ್ಟು ಮತ ಗಳಿಸಿಕೊಳ್ಳಲಿವೆ.

ಸಿದ್ದರಾಮಯ್ಯ ಸಾಧನೆ ಕುರಿತು 18% ರಷ್ಟು ತೃಪ್ತಿ ವ್ಯಕ್ತಪಡಿಸಿದ್ದು, 27%ರಷ್ಟು ಮಂದಿ ಪರವಾಗಿಲ್ಲ ಎಂದಿದ್ದಾರೆ. 34%ರಷ್ಟು ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದು, 21%ರಷ್ಟು ಮಂದಿ ಪ್ರತಿಕ್ರಿಯಿಸಿಲ್ಲ

ಗುಜರಾತ್‌, ಛತ್ತೀಸ್‌ಗಢ, ದೆಹಲಿಯ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು ಒಟ್ಟು 366 ಸ್ಥಾನಗಳನ್ನು ಎನ್‌ಡಿಎ ಒಕ್ಕೂಟ ಗಳಿಸಲಿದೆ. INDIA ಒಕ್ಕೂಟ 104, ಇತರರು 73 ಸ್ಥಾನ ಗಳಿಸಲಿದೆ.

ಶೇಕಡಾವಾರುಮತ ಪ್ರಮಾಣದಲ್ಲಿ ಎನ್‌ಡಿಎ 41.8% ಮತ ಪಡೆದರೆ INDIA ಒಕ್ಕೂಟ 28.6% ಮತ ಪಡೆಯಲಿದ್ದಾರೆ. ಇತರರು 29.6% ಮತ ಗಳಿಸಲಿದ್ದಾರೆ ಎಂದು ಹೇಳಿದೆ. ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಬಿಜೆಪಿ 77 ಸ್ಥಾನಗಳನ್ನು ಗೆಲ್ಲಲಿದೆ. ನಿತೀಶ್‌ಕುಮಾರ್‌ ಸೇರ್ಪಡೆಯಿಂದ ಬಿಹಾರದಲ್ಲಿ ಎನ್‌ಡಿಎ 35 ಸೀಟುಗಳನ್ನು ಗೆಲ್ಲಲಿದ್ದು, ಇತರ ಪಕ್ಷಗಳು 5 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ.

ಪಶ್ಚಿಮ ಬಂಗಾಳದ ಒಟ್ಟು 42 ಸ್ಥಾನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ (TMC) 26 ಕ್ಷೇತ್ರಗಳನ್ನು ಗೆಲ್ಲಲಿದೆ. ತಮಿಳುನಾಡಿನಲ್ಲಿ ಎನ್‌ಡಿಎ ಒಂದು ಹಾಗೂ ಇಂಡಿಯಾ ಮೈತ್ರಿಕೂಟ 36 ಸ್ಥಾನವನ್ನು ಪಡೆಯಲಿದೆ.

 

 

Related Articles

Back to top button
error: Content is protected !!