ಇತರೆ

ಟಿ.ಎಂ.ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ, ಭಾರತೀಯ ವಿಕಾಸ ಟ್ರಸ್ಟ್ ಸ್ವಸಹಾಯ ಸಂಘಗಳ ಒಕ್ಕೂಟ: ಮಹಿಳಾ ಸಶಕ್ತೀಕರಣ ಮತ್ತು ಬ್ಯಾಂಕಿಂಗ್ ಮಾಹಿತಿ ಶಿಬಿರ

Views: 38

ಕನ್ನಡ ಕರಾವಳಿ ಸುದ್ದಿ: ಟಿ.ಎಂ.ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಮತ್ತು ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರಿಗೆ ಮಹಿಳಾ ಸಶಕ್ತೀಕರಣ ಮತ್ತು ಬ್ಯಾಂಕಿಂಗ್ (FLC) ಬಗ್ಗೆ ಮಾಹಿತಿ ಶಿಬಿರವನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರವಡಿ ರೋಟರಿ ಸಮುದಾಯ ಭವನದ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕೆನರಾ ಬ್ಯಾಂಕ್ ಸಂಸ್ಥೆಯ ಅಮೂಲ್ಯ ಸಾಕ್ಷರತಾ ಕೇಂದ್ರದ FLC ಆಶಾಲತಾ ಅವರು ಬ್ಯಾಂಕಿಂಗ್ ಮಾಹಿತಿ ಕೆನರಾ ಏಂಜಲ್ ಖಾತೆ ಮತ್ತು ಬ್ಯಾಂಕಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸೌರಶಕ್ತಿ ಬಳಕೆ ಮತ್ತು ಜೀವನೋಪಾಯ ಯಂತ್ರಗಳು ಮತ್ತು ಬಿವಿಟಿ ತರಬೇತಿ, ಕೌಶಲ್ಯ ತರಬೇತಿಯ ಬಗ್ಗೆ ಬಿವಿಟಿಯ ರಾಘವೇಂದ್ರ ಆಚಾರ್ಯ ಮಾಹಿತಿ, ಜೀವನ ಕೌಶಲ್ಯ, ಮಹಿಳೆಯರ ಸ್ವ ಉದ್ಯಮ ವರದಕ್ಷಿಣೆ ಕಿರುಕುಳ ಮತ್ತು ಕಾನೂನಿನ ರಕ್ಷಣೆ ಮಹಿಳಾ ಸಬಲೀಕರಣ ದ ಬಗ್ಗೆ ಪ್ರಾಮುಖ್ಯತೆ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್ GENDER SPECIALIST ಶಾರದ ಮಾಹಿತಿ ನೀಡಿದರು. ರೋಟರಿ ಸದಸ್ಯರು ಮಹಾಬಲ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು ಶ್ವೇತಾ, ಅಂಗನವಾಡಿ ಮೇಲ್ವಿಚಾರಕಿ ಲಲಿತ, ಕಾರ್ಯಕರ್ತರು ಶೋಭಾ , ಪ್ರಮೀಳಾ ಕಾರ್ಯಕ್ರಮ ಸಂಯೋಜನೆಗೈದರು. ಒಟ್ಟು 61 ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Back to top button
error: Content is protected !!