ಜನಮನ

ಟಿಪ್ಪರ್ ಗೆ ಕಾರು ಡಿಕ್ಕಿ: ಓರ್ವ ಸಾವು

Views: 0

ಟಿಪ್ಪರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿರುವ ವ್ಯಕ್ತಿಯೊಬ್ಬ ಮೃತಪಟ್ಟ  ಘಟನೆ ಕಿನ್ನಿಗೋಳಿ ಸಮೀಪ ಮೂರು ಕಾವೇರಿಯಲ್ಲಿ ನಡೆದಿದೆ.

ಕಾರಿನಲ್ಲಿ ಆರು ಮಂದಿ ಪ್ರಯಾಣಿಕರು ಇದ್ದರು ರಾಮಣ್ಣ(49) ಮೃತಪಟ್ಟವರು.

ಐಕಳ ಕಡೆಯಿಂದ ಮುಲ್ಕಿ ಕಡೆ ಸಂಚರಿಸುತ್ತಿದ್ದ ಟಿಪ್ಪರ್ ಗೆ ಮುಲ್ಕಿಯಿಂದ ಬೆಳುವಾಯಿ ಕಡೆಗೆ ಸಂಚರಿಸುತ್ತಿರುವ ಕಾರು ಮೂರುಕಾವೇರಿ ಸಮೀಪದಲ್ಲಿ ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

 

ರಸ್ತೆಯಲ್ಲಿ ಕಾರು ಸಂಚರಿಸುತ್ತಿರುವಾಗ ರಸ್ತೆಯ ಅಂಚಿನ ಕೆಳಗೆ ಇಳಿದಿತ್ತು. ಅಂಚಿನಿಂದ ಮೇಲೆ ಬರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮುಂಭಾಗದಿಂದ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ.

Related Articles

Back to top button
error: Content is protected !!