ಜನಮನ

ಜ್ಯುವೆಲ್ಲರಿ ಶಾಪ್​ಗೆ ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಟ್ಟ ತಾಯಿ, ಮಗಳು.. 32 ಗ್ರಾಂ ಚಿನ್ನದ ಸರ ಕದ್ದು ಪರಾರಿ!

Views: 0

ತುಮಕೂರು: ಗಾಯನದಲ್ಲಿ, ನಟನೆಯಲ್ಲಿ, ಡ್ಯಾನ್ಸ್​ನಲ್ಲಿ ಇನ್ನಿತರ ಕಾರ್ಯ ವೈಖರಿಗಳಲ್ಲಿ ತಾಯಿ-ಮಗಳು ಸೇರಿದರೆ ಏನ್​ ಬೇಕಾದ್ರು ಸಾಧಿಸುತ್ತಾರೆ. ಈ ಬಗ್ಗೆ ತಾಯಿ ಮಗಳು ಪ್ರೂವ್​ ಮಾಡಿದ್ದಾರೆ ಸಹ ತೋರಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಾಯಿ-ಮಗಳು ಗ್ರಾಹಕರ ಸೋಗಿನಲ್ಲಿ ಬಂದು 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.

ಹೌದು, ಗ್ರಾಹಕರಂತೆ ಬಂದ ತಾಯಿ-ಮಗಳು 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿರೋ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ಗುಂಚಿ ಸರ್ಕಲ್ ಬಳಿಯಿರುವ ಎಸ್.ಎನ್.ಡಿ ಜ್ಯುವೆಲ್ಲರಿ ಶಾಪ್​ಗೆ ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಟ್ಟ ಯುವತಿ ಹಾಗೂ ಮಹಿಳೆ, ಚಿನ್ನದ ಸರ ಖರೀದಿ ಮಾಡುವುದಾಗಿ ಸರಗಳನ್ನು ಎತ್ತಿ ಎತ್ತಿ ನೋಡಿದ್ದಾರೆ. ಈ ವೇಳೆ, ಯುವತಿ ಮಾತಿನ ಮೂಲಕ ಮಾಲೀಕನ ಗಮನವನ್ನು ಬೇರೆಡೆಗೆ ಸೆಳೆದ್ರೆ, ಅತ್ತ ಮಹಿಳೆ ಚಿನ್ನದ ಸರವನ್ನು ಕದ್ದಿದ್ದಾಳೆ.

ಇನ್ನು, ಈ ಇಬ್ಬರು ಚಿನ್ನದ ಸರ ಕಳ್ಳತನ ಮಾಡುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!