ಜನಮನ

ಜೈಲು ಗೋಡೆ ಮೇಲಿಂದ ಹಾರಿ ಅತ್ಯಾಚಾರ ಆರೋಪಿ ಪರಾರಿ

Views: 0

ಅತ್ಯಾಚಾರ ಆರೋಪದಲ್ಲಿ ಬಂಧಿಯಾಗಿದ್ದ ಆರೋಪಿಯೊಬ್ಬ ಜೈಲಿನಿಂದ ಪರಾರಿಯಾಗಿರುವ ಘಟನೆ ದಾವಣಗೆರೆ ನಗರದ ಉಪ ಕಾರಾಗ್ರಹದಲ್ಲಿ ನಡೆದಿದೆ.

ಜೈಲಿನಿಂದ ತಪ್ಪಿಸಿಕೊಂಡ ಆರೋಪಿ ವಸಂತ್ (23) ಈತ ಕಾರಾಗೃಹದ ಗೋಡೆಯ ಮೇಲಿಂದ ಜಿಗಿದು ಪರಾರಿಯಾಗಿದ್ದಾನೆ.

ಜೈಲಿನಿಂದ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜೈಲಿನ ಗೋಡೆ ಮೇಲಿನಿಂದ ಜಿಗಿದ ಆರೋಪಿ ಗಾಯಗೊಂಡರೂ ಯಾರು ಬಾರದಿರುವುದನ್ನ ಕಂಡು ನಿಧಾನವಾಗಿ ಎದ್ದು ನಿಂತು ಕುಂಟುತ್ತಲೆ ರಸ್ತೆಯಲ್ಲಿ ಓಡಿ ಪರಾರಿಯಾಗಿದ್ದಾನೆ.

ದಾವಣಗೆರೆಯ ಕರೂರ ಪ್ರದೇಶದ ನಿವಾಸಿಯಾಗಿದ್ದ ವಸಂತ್ ವೃತ್ತಿಯಲ್ಲಿ ಆಟೋ ಚಾಲಕ ದಾವಣಗೆರೆ ಮಹಿಳಾ ಠಾಣೆಯಲ್ಲಿ ವಸಂತ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು ಆತನನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಜೈಲಿನ ಅಧಿಕಾರಿಗಳು ಸಿಬ್ಬಂದಿಗಳ ನಿರ್ಲಕ್ಷಕ್ಕೆ ಹಾಡ ಹಗಲೇ ಜೈಲಿನ ಗೋಡೆ ಹತ್ತಿ ಜಿಗಿದು ಆರೋಪಿ ಪರಾರಿಯಾಗಿದ್ದಾನೆ.

Related Articles

Back to top button
error: Content is protected !!