ಇತರೆ

ಜೈಲಲ್ಲಿರುವ ಮಗನಿಗೆ ಗಾಂಜಾ ತಂದ ತಾಯಿ! 

Views: 152

ತಾಯಿಯೊಬ್ಬಳು ತನ್ನ ಜೈಲಿನಲ್ಲಿರುವ ಮಗನಿಗೆ ಗಾಂಜಾ ಕೊಂಡೊಯ್ಯಲು ಯತ್ನಿಸಿದ ಘಟನೆ ನಡೆದಿದ್ದು, ಅನುಮಾನಗೊಂಡ ಜೈಲಾಧಿಕಾರಿಗಳು ತಾಯಿಯನ್ನು ಬಂಧಿಸಿದ್ದಾರೆ.

47 ವರ್ಷದ ಲತಾ ಎಂಬಾಕೆ ವಿಯ್ಯೂರು ಸೆಂಟ್ರಲ್ ಜೈಲಿನಲ್ಲಿರುವ ತನ್ನ ತನ್ನ ಮಗ ಹರಿಕೃಷ್ಣನನ್ನು  ನೋಡಲು ಬರುತ್ತಾಳೆ. ಈ ವೇಳೆ ಮಗನಿಗಾಗಿ 80 ಗ್ರಾಂ ಗಾಂಜಾವನ್ನು ತಂದಿದ್ದಾಳೆ.

ಕೇಂದ್ರ ಕಾರಾಗೃಹ ಪ್ರವೇಶ ದ್ವಾರದ ಬಳಿ ಲತಾರನ್ನು ಜೈಲು ಸಿಬ್ಬಂದಿ ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. 80 ಗ್ರಾಂ ಗಾಂಜಾವನ್ನು ತನ್ನ ಬ್ಯಾಗಿನಲ್ಲಿ  ಇರಿಸಿಕೊಂಡು ಕೊಂಡೊಯ್ಯಲು ಮುಂದಾಗಿದ್ದಾಳೆ. ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಸದ್ಯ ಲತಾರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಲತಾ ತನ್ನ ಮಗನನ್ನು ಕಾಣಲು ಜೈಲಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲೂ ಗಾಂಜಾ ಕೊಂಡೊಯ್ದಿದ್ದಾರಾ ಎಂಬ ಅನುಮಾನದ ಮೇರೆಗೂ ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!