ಆರೋಗ್ಯ

ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ: ಅಂತರಾಷ್ಟ್ರೀಯ ಯೋಗ ದಿನಾಚರಣೆ

Views: 12

ಕನ್ನಡ ಕರಾವಳಿ ಸುದ್ದಿ: ಜೂನ್ 21 ರಂದು ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್  ಕಿರಿಮಂಜೇಶ್ವರ ಜಂಟಿಯಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರದಲ್ಲಿ ಆಚರಿಸಲಾಯಿತು.

ಜನತಾ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ನಡೆಸಿದರು. ಕಾಲೇಜಿನ ರಾಷ್ಟ್ರಮಟ್ಟದ ಯೋಗಪಟು ನಿರೀಕ್ಷಾ ಹಾಗೂ ಸಾನಿಧ್ಯಾ ಎಸ್ ಮೊಗವೀರ ಮತ್ತು ವಂಶಿತ್(7ನೇ ತರಗತಿ) ಯೋಗ ನೃತ್ಯವನ್ನು ಪ್ರದರ್ಶಿಸಿದರು. ಡ್ರಾಮಾ ಜೂನಿಯರ್ ಖ್ಯಾತಿಯ ಸಿಂಚನ ಕೋಟೇಶ್ವರ (ಪ್ರಥಮ ಪಿಯುಸಿ) ಅವರಿಂದ ಡ್ರಾಮಾ ಪ್ರದರ್ಶನ ನಡೆಯಿತು.

ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಅವರು ಯೋಗದ ಮಹತ್ವವನ್ನು ಸಾರುತ್ತ ಪ್ರತಿಯೊಬ್ಬರು ಯೋಗವನ್ನು ಕಲಿತು ಆರೋಗ್ಯಕರ ಜೀವನದ ಕಡೆಗೆ ಹೆಜ್ಜೆ ಹಾಕಬೇಕೆಂದರು.

ಈ ಕಾರ್ಯಕ್ರಮದಲ್ಲಿ ಜನತಾ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು, ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಯೋಗ ಶಿಕ್ಷಕಿ ಅನ್ವಿತಾ ಸ್ವಾಗತಿಸಿ, ನಿರೂಪಿಸಿದರು.ಸಮಾಜ ವಿಜ್ಞಾನ ಶಿಕ್ಷಕ ಸುಬ್ರಹ್ಮಣ್ಯ ಮರಾಟಿ ವಂದಿಸಿದರು.

Related Articles

Back to top button