ಇತರೆ

ಚಿಕ್ಕಮಗಳೂರು: ಸೆಲ್ಫಿ ತೆಗೆಯುವ ವೇಳೆ ಜಲಪಾತದಿಂದ ಕಾಲು ಜಾರಿ ಬಿದ್ದು ಪ್ರವಾಸಿಗ ಸಾವು

Views: 95

ಚಿಕ್ಕಮಗಳೂರು: ಜಲಪಾತ ನೋಡಲು ಬಂದಿದ್ದ ಪ್ರವಾಸಿಗನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ ನಲ್ಲಿ ನಡೆದಿದೆ.

ಹೈದರಾಬಾದ್ ಮೂಲದ 25ರ ವರ್ಷದ ಯುವಕ ಶ್ರವಣ್ ಮೃತಪಟ್ಟವರು.

ಶ್ರವಣ್ ಮತ್ತು ಸ್ನೇಹಿತ ಹೈದರಾಬಾದ್ ನಿಂದ‌ ಚಿಕ್ಕಮಗಳೂರಿಗೆ ಪ್ರವಾಸ ಕೈಗೊಂಡಿದ್ದರು. ಇಂದು ಬೆಳಿಗ್ಗೆ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್ ಗೆ ತೆರಳಿದ್ದರು. ಹೆಬ್ಬೆ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯುವ ವೇಳೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button
error: Content is protected !!