ಸಾಂಸ್ಕೃತಿಕ

ಚಂದನ್-ನಿವೇದಿತಾ ಗೌಡ ಒಂದಾಗಿ ಇಂದು ಸುದ್ಧಿಗೋಷ್ಠಿಯಲ್ಲಿ ಸ್ಪಷ್ಟನೆ!?

Views: 190

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ನಂತರ ಇದೀಗ ಏಕಾಏಕಿ ಇವರು ಬೇರೆ ಆಗುವ ನಿರ್ಧಾರ ಘೋಷಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈಗ ಇಬ್ಬರೂ ಜಂಟಿಯಾಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಮೂಲಕ ಹಲವು ವದಂತಿಗೆ ಇವರು ತೆರೆ ಎಳೆಯಲಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ದಾಂಪತ್ಯಕ್ಕೆ ಈಗ ನಾಲ್ಕು ವರ್ಷ ಇವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದರೆ, ಈಗ ಇವರು ಬೇರೆ ಆಗುತ್ತಿದ್ದಾರೆ. ಇದಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ ಇವರು ಬೇರೆ ಆಗುತ್ತಿರುವ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಮಗು ಪಡೆಯಲು ಒಪ್ಪದ್ದಕ್ಕೆ ನಿವೇದಿತಾ ವಿಚ್ಛೇದನ ಪಡೆದರು, ನಟಿಯಾಗಿ ಮುಂದುವರಿಯಬೇಕು ಎಂಬುದಕ್ಕೆ ಗಂಡನಿಂದ ದೂರ ಆಗುತ್ತಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿ ಬಂದವು. ಇದಕ್ಕೆಲ್ಲ ಸುದ್ದಿಗೋಷ್ಠಿಯಲ್ಲಿ ಇವರು ಸ್ಪಷ್ಟನೆ ನೀಡಲಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ. ಈ ವೇಳೆ ಯಾವೆಲ್ಲ ವಿಚಾರ ಮಾತನಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ.

 

 

Related Articles

Back to top button
error: Content is protected !!