ಇತರೆ

ಗೋಕರ್ಣ ಸಮುದ್ರದಲ್ಲಿ ಈಜಾಡಲು ತೆರಳಿ, ಅಲೆಯ ರಭಸಕ್ಕೆ ಸಿಲುಕಿ ಮುಳುಗುತ್ತಿರುವ ವಿದೇಶಿ ಮಹಿಳೆ ರಕ್ಷಣೆ

Views: 90

ಕನ್ನಡ ಕರಾವಳಿ ಸುದ್ದಿ: ಗೋಕರ್ಣ ಕುಡ್ಲೆಯ ಸಮುದ್ರ ನೀರಿನಲ್ಲಿ ಈಜಾಡಲು ತೆರಳಿ, ಅಲೆಯ ರಭಸಕ್ಕೆ ಮುಳುಗುತ್ತಿದ್ದ ಕಜಕಿಸ್ತಾನ ದೇಶದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ.

ಕಜಿಕಿಸ್ತಾನದ ಐದಾಲಿ (25) ರಕ್ಷಿಸಲಾದ ಮಹಿಳೆ. ವಿದೇಶಿ ದಂಪತಿ ಸಮುದ್ರದಲ್ಲಿ ಈಜಾಡಲು ತೆರಳಿ, ಅಲೆಯ ರಭಸಕ್ಕೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಗಮನಿಸಿದ ಮೈಸ್ಟಿಕ್ ಗೋಕರ್ಣ ಅನ್ವೆಂಚರ್ಸ್ ಸಿಬ್ಬಂದಿ ಹಾಗೂ ಜೀವ ರಕ್ಷಕ ಸಿಬ್ಬಂದಿ ವಾಟರ್ ಬೈಕ್ ಮೂಲಕ ಮಹಿಳೆಯನ್ನು ರಕ್ಷಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲಕ್ಷ್ಮೀಕಾಂತ ಹರಿಕಂತ್ರ, ಮುಂಜುನಾಥ ಹರಿಕಂತ್ರ, ಗಿರೀಶ ಗೌಡ ಮತ್ತು ನಾಗೇಂದ್ರ ಕುರ್ಲೆ ಶೇಖರ ಹರಿಕಂತ್ರ ಭಾಗವಹಿಸಿದ್ದರು.

 

Related Articles

Back to top button
error: Content is protected !!