ಪ್ರವಾಸೋದ್ಯಮ

ಗೂಗಲ್‌ ಮ್ಯಾಪ್‌ ಸೂಚಿಸಿದ ದಿಕ್ಕಿನಲ್ಲೇ ಕಾರು ಚಲಾಯಿಸಿ ಹಳ್ಳಕ್ಕೆ ಬಿದ್ದ ಕಾರು!!

Views: 84

ತಿರುವನಂತಪುರಂ: ಫೋರ್ಡ್ ಎಂಡೋವರ್ ಕಾರಿನಲ್ಲಿ ಹೋಗಿದ್ದ ನಾಲ್ವರು ಗೂಗಲ್‌ನಲ್ಲಿ ರೂಟ್ ಮ್ಯಾಪ್‌ ಅನ್ನ ನೋಡಿಕೊಂಡು ಫಜೀತಿ ಅನುಭವಿಸಿದ್ದಾರೆ.

ಇಂದು ಕೇರಳ ಪ್ರವಾಸಕ್ಕೆಂದು ತೆರಳಿದ್ದ ಹೈದರಾಬಾದ್‌ನ ನಾಲ್ವರು, ಗೂಗಲ್ ಮ್ಯಾಪ್ ಹೇಳಿದಂತೆ ತೆರಳಿ ಸೀದಾ ಹಳ್ಳವೊಂದಕ್ಕೆ ಕಾರು ಇಳಿಸಿರೋ ಘಟನೆಯೊಂದು ನಡೆದು ಹೋಗಿದೆ.

ಓರ್ವ ಮಹಿಳೆ ಸೇರಿದಂತೆ ನಾಲ್ಕು ಮಂದಿ ಸೇರಿಕೊಂಡು ಅಳಪ್ಪುಳದ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗೂಗಲ್ ಮ್ಯಾಪ್ ಎಡಭಾಗಕ್ಕೆ ತಿರುವು ತೆಗೆದುಕೊಳ್ಳುವಂತೆ ಹೇಳಿದ್ದರಿಂದ ಎಡಭಾಗಕ್ಕೆ ತಿರುವು ತೆಗೆದುಕೊಂಡಾಗ ಏಕಾಏಕಿ ಕಾರು ಹಳ್ಳಕ್ಕೆ ಬಿದ್ದಿದೆ. ತಕ್ಷಣವೇ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಹೊರಬಂದು ಸ್ಥಳೀಯರಿಗೆ ಸಹಾಯ ಮಾಡುವಂತೆ ಕೋರಿದ್ದಾರೆ. ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು ಅವರ ರಕ್ಷಣೆ ಧಾವಿಸಿದ್ದರು. ಹಳ್ಳದಲ್ಲಿ ಬಿದ್ದಿದ್ದ ನಾಲ್ವರನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಳ್ಳದಲ್ಲಿ ಬಿದ್ದಿದ್ದ ಕಾರನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Related Articles

Back to top button
error: Content is protected !!