ಜನಮನ

ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ ಟ್ರಕ್ ಗಳ ಮುಖಾಮುಖಿ ಡಿಕ್ಕಿ :10 ಮಂದಿ ಸಾವು

Views: 0

ಗುಜರಾತಿನ ಬಾವ್ಲಾ ಬಗೋದರ್ ಹೆದ್ದಾರಿಯಲ್ಲಿ ಎರಡು ಟ್ರಕ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದು 10 ಮಂದಿ ಸಾವನಪ್ಪಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಗೋದರ ಬಳಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಸಣ್ಣ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದಾರೆ.

ಮಿನಿ ಟ್ರಕ್ ನಲ್ಲಿದ್ದವರು ಚೋಟಿಲಾಗೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ .

ಅಪಘಾತ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಮಿನಿ ಟ್ರಕ್ ನಲ್ಲಿ ಮುಂದೆ ಮೂರು ಜನ ಹಿಂದೆ ಹತ್ತು ಜನ ಕುಳಿತಿದ್ದರು. ಮೃತರಲ್ಲಿ 5 ಮಂದಿ ಮಹಿಳೆಯರು. ಇಬ್ಬರು ಪುರುಷರು. 3 ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.

Related Articles

Back to top button
error: Content is protected !!