ಗಾಳಿಯ ರಭಸಕ್ಕೆ ಸಮುದ್ರದ ಮಧ್ಯೆ ಒಡೆದ ಬೋಟ್, ಅಪಾಯದಲ್ಲಿ ಸಿಲುಕಿದ 7 ಮೀನುಗಾರರ ರಕ್ಷಣೆ

Views: 36
ಕಾರವಾರ, ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್ ಒಡೆದು ಮುಳುಗುತ್ತಿದ್ದ ಬೋಟ್ ಹಾಗೂ 7 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಕಾರವಾರ ಗೋವಾ ಗಡಿಭಾಗದ ಅರಬ್ಬಿ ಸಮುದ್ರದಲ್ಲಿ ಬುಧವಾರ ನಡೆದಿದೆ.
ಮಂಗಳೂರಿನಿಂದ ಕಳೆದ ಮೂರು ದಿನಗಳ ಹಿಂದೆ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ರಾಯಲ್ ಬ್ಲ್ಯೂ ಹೆಸರಿನ ಮೀನುಗಾರಿಕಾ ಬೋಟ್ ಗೋವಾದ ಬೈತೊಲ್ ಬಳಿ ಆಳ ಸಮುದ್ರದಲ್ಲಿ ಬುಧವಾರ ಮುಂಜಾನೆ ಗಾಳಿ ರಭಸಕ್ಕೆ ಬೋಟ್ ತಳಭಾಗ ಒಡೆದು ಒಳಭಾಗಕ್ಕೆ ನೀರು ನುಸುಳಲಾರಂಭಿಸಿತ್ತು. ಬಳಿಕ ಮೀನುಗಾರರು ನೀರನ್ನು ಹೊರ ಹಾಕಿದ್ದರಾದರೂ ನೀರು ತುಂಬುತ್ತಿದ್ದ ಕಾರಣ ಮುಳುಗಡೆ ಭೀತಿಯಲ್ಲಿತ್ತು.
ತಕ್ಷಣ ಮೀನುಗಾರರು ಮಾಲಿಕರು, ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಬಳಿಕ ನೆರವಿಗೆ ದಾವಿಸಿದ ಏಷ್ಯನ್ ಬ್ಲ್ಯೂ, ಬ್ಲಾಕ್ ಬೆರಿ, ವೈಟ್ ಆರ್ಬಿಟ್, ಸಿ ಪ್ರಿನ್ಸ್, ಸಿ ಹಂಟರ್ ಹೆಸರಿನ ಬೋಟಗಳ ಮೀನುಗಾರರು ನೆರವಿಗೆ ದಾವಿಸಿದ್ದರು. ಕೊನೆಗೆ ಎರಡು ಬೋಟ್‌ಗಳಿಗೆ ಬೋಟ್ ಕಟ್ಟಿಕ್ಕೊಂಡು ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ನೆರವಿನೊಂದಿಗೆ ಕಾರವಾರ ಬಂದರಿಗೆ ಏಳೆದು ತರಲಾಗಿದೆ.






