ಇತರೆ

ಗಂಡ ಹೆಂಡ್ತಿ ಜಗಳ: ಅಪ್ರಾಪ್ತ ಪುತ್ರಿಯೊಂದಿಗೆ ಮಹಿಳೆ ನಾಪತ್ತೆ

Views: 65

ಕನ್ನಡ ಕರಾವಳಿ ಸುದ್ದಿ: ವಿವಾಹಿತ ಮಹಿಳೆಯೋರ್ವರು ಗಂಡನೊಂದಿಗೆ ಊಟದ ವಿಚಾರದಲ್ಲಿ ಜಗಳ ಮಾಡಿ ತನ್ನ ಅಪ್ರಾಪ್ತ ಪುತ್ರಿಯೊಂದಿಗೆ ನಾಪತ್ತೆಯಾದ ಘಟನೆ ಮಾ. 20 ರಂದು ಬೆಳಪು ಗ್ರಾಮದ ಪುಂಚಲಕಾಡುವಿನಲ್ಲಿ ನಡೆದಿದೆ.

ಕಾಪು ತಾ| ಬೆಳಪು ಗ್ರಾಮದ ಪುಂಚಲಕಾಡು ಮರಿಯ ಬೇಕರಿ ಹತ್ತಿರದ ಬಾಡಿಗೆ ಮನೆ ನಿವಾಸಿ ರೇಣುಕಾ ಗಂಗಾಧರ್ ಪೂಜೇರ್ (28) ಕಾಣೆಯಾದ ಮಹಿಳೆ ಮತ್ತು ಪ್ರತೀಕ್ಷಾ ಗಂಗಧಾರ್ ಪೂಜೇರ್ (11) ಅಪ್ರಾಪ್ತ ಮಗಳು.

ಮಾ. 20 ರಂದು ಮಧ್ಯಾಹ್ನ ಊಟದ ವಿಚಾರದಲ್ಲಿ ಗಂಡ ಗಂಗಾಧ‌ರ್ ಮತ್ತು ರೇಣುಕಾಳ ಮಧ್ಯ ಸಣ್ಣ-ಪುಟ್ಟ ಜಗಳವಾಗಿತ್ತು. ಬಳಿಕ ಗಂಡ ಅಂಗಡಿ ಕೆಲಸದ ಬಗ್ಗೆ ಹೋಗುವುದಾಗಿ ರೇಣುಕಾಳಿಗೆ ತಿಳಿಸಿ ಹೋಗಿದ್ದರು. ಗಂಡ ಕೆಲಸ ಮುಗಿಸಿ ವಾಪಾಸ್ಸು ರಾತ್ರಿ ಮನೆಗೆ ಬಂದಾಗ ಮನೆಯ ಬಾಗಿಲು ಹಾಕಿದ್ದು, ರೇಣುಕಾ ಮೊಬೈಲ್ ಫೋನ್ ಮನೆಯಲ್ಲಿಯೇ ಇಟ್ಟು ರೇಣುಕಾ ಮಗಳು ಪ್ರತೀಕ್ಷಳೊಂದಿಗೆ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದಾರೆ ಎಂದು ಗಂಗಾಧರ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!