ಇತರೆ
ಗಂಡನ ಕಿರುಕುಳದಿಂದ ಪತ್ನಿ ಆತ್ಮಹತ್ಯೆ

Views: 0
ಗಂಡನ ಕಿರುಕುಳದಿಂದ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಗ್ರಾಮದ ನಿವಾಸಿ ಹೆಚ್ ಎಂ ಮಧುಸೂದನ್ ಎಂಬುವರು ಪತ್ನಿ ಆಶಾ (34 )ಮೃತರು. ಎಂದು ಗುರುತಿಸಲಾಗಿದೆ.
ಕಳೆದ 9 ವರ್ಷಗಳ ಹಿಂದೆ ಮಧುಸೂದನ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗಳು ಆಗಾಗ ಜಗಳ ಮಾಡುತ್ತಿದ್ದು ,ಈ ವಿಚಾರವಾಗಿ ಹಿರಿಯರು ಸಂಧಾನ ನಡೆಸಿ, ಪ್ರಯೋಜನವಾಗಲಿಲ್ಲ ಇತ್ತೀಚೆಗೆ ಮಧುಸೂದನ್ ತನ್ನ ಪತ್ನಿ ಆಶಾರನ್ನು ತವರು ಮನೆಯಿಂದ ಹಣ ಪಡೆದು ಬರುವಂತೆ ಕಿರುಕುಳ ನೀಡುತ್ತಿದ್ದರು. ಗಂಡನ ಕಿರುಕುಳ ಸಹಿಸಲಾಗದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .ಸಹೋದರ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ






