ಕರಾವಳಿ

ಗಂಗೊಳ್ಳಿ: ಎದೆ ಹಾಲು ಕುಡಿದು ಮಲಗಿದ್ದ ಮಗು ಸಾವು

Views: 337

ಗಂಗೊಳ್ಳಿ :ತಾಯಿಯ ಎದೆ ಹಾಲು ಕುಡಿದು ಮಲಗಿದ್ದ ಒಂದು ತಿಂಗಳ ಮಗು ಮೃತಪಟ್ಟ ಘಟನೆ ಗುಜ್ಜಾಡಿಯಲ್ಲಿ ನಡೆದಿದೆ.

ಗುಜ್ಜಾಡಿಯ ನೇತ್ರಾವತಿ ಅವರ ಮಗು ಶಾನ್ಯಾಳಿಗೆ ಎದೆ ಹಾಲು ಉಣಿಸಿ ಕೊಠಡಿಯಲ್ಲಿ ಮಲಗಿಸಿ ಹೊರಗೆ ಬಂದಿದ್ದಾರೆ. ಸ್ವಲ್ಪ ಸಮಯದ ನಂತರ ನೇತ್ರಾವತಿಯವರ ತಂದೆ ಲಕ್ಷ್ಮಣ ಅವರು ಮಗುವನ್ನು ನೋಡಲು ಕೊಠಡಿಗೆ ಹೋದಾಗ ಮಗು ಉಸಿರಾಡದೆ ಇರುವುದನ್ನು ಗಮನಿಸಿ ಗಾಬರಿಗೊಂಡು ಮೈ ಮುಟ್ಟಿ ನೋಡಿದಾಗ ತಣ್ಣಗಾಗಿರುವುದು ಕಂಡು ಬಂದಿದೆ. ಮತ್ತು ಯಾವುದೇ ಪ್ರತಿಕ್ರಿಯೆ ಇರದಿದ್ದ ಕಾರಣ ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!