ಗಂಗೊಳ್ಳಿಯಲ್ಲಿ ಕ್ರಿಕೆಟ್ ಆಡುವಾಗ ಬಾಲಕ ಸಾವು ಪ್ರಕರಣ: ಸಾವಿನ ಬಗ್ಗೆ ಸಂಶಯ, ತನಿಖೆ ಆಗ್ರಹಿಸಿ ಎಸ್ಪಿಗೆ ಪತ್ರ
Views: 137
ಕನ್ನಡ ಕರಾವಳಿ ಸುದ್ದಿ: ಮಾತಿನ ಚಕಮಕಿ ಆಗಿದೆ. ಈ ಗುಲ್ವಾಡಿಯ ನಿವಾಸಿ ಶಂಶುದ್ದೀನ್ ಅವರ ಪುತ್ರ ರಿಯಾಜ್ ಅಹ್ಮದ್ ಜ.26 ರಂದು ಗಂಗೊಳ್ಳಿಯಲ್ಲಿ ಕ್ರಿಕೆಟ್ ಆಡುವಾಗ ಅಸ್ವಸ್ಥಗೊಂಡು ಸಾವನ್ನಪ್ಪಿದ್ದು, ಆದರೆ ಇದು ಸಹಜ ಸಾವಲ್ಲ, ಈ ಸಾವಿನಲ್ಲಿ ಸಂಶಯವಿದೆ ಎನ್ನುವ ಶಂಕೆ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಿಯಾಜ್ ಅಭಿಮಾನಿ ಬಳಗ ಎಂದು ಬರೆದಿರುವ ಪತ್ರವೊಂದು ಹರಿದಾಡುತ್ತಿದೆ.
ಈ ಸಾವಿನ 8-10 ದಿನದ ಹಿಂದೆ ತ್ರಾಸಿಯ ಅಂಗಡಿಯೊಂದರಲ್ಲಿ ರಿಯಾಜ್ ಹಾಗೂ ಕೆಲವು ಆಪ್ತ ಸ್ನೇಹಿತರ ನಡುವೆ ಹಣದ ವಿಚಾರಕ್ಕೆ ವೇಳೆ ರಿಯಾಜ್ ಮೇಲೆ ಹಲ್ಲೆ ಕೂಡ ಆಗಿತ್ತು. ಕಣ್ಣಿಗೆ ಗಾಯ ಕೂಡ ಆಗಿತ್ತು. ಅದಾದ ಅನಂತರ ರಿಯಾಜ್ ಕ್ರಿಕೆಟ್ ಆಡುವಾಗ ಕಣ್ಣಿನಿಂದ ಗಂಗೊಳ್ಳಿಯಲ್ಲಿ ರಕ್ತ ಸುರಿದು ಸಾವನ್ನಪ್ಪಿದ್ದರು. ಅನಂತರ ಗಡಿಬಿಡಿಯಲ್ಲಿ ರಿಯಾಜ್ ಮರಣೋತ್ತರ ಪರೀಕ್ಷೆ ಕೂಡ ನಡೆಸದೆ ಅಂತ್ಯಕ್ರಿಯೆ ಮಾಡಿದ್ದಾರೆ ಎನ್ನುವುದಾಗಿ ಈ ಪತ್ರದಲ್ಲಿದೆ.
ಈ ಪತ್ರದ ಪ್ರತಿಯನ್ನು ರಿಯಾಜ್ ತಂದೆ, ಕುಂದಾಪುರ ಡಿವೈಎಸ್ಪಿ ಬೈಂದೂರು ವೃತ್ತ ನಿರೀಕ್ಷಕರು, ಗಂಗೊಳ್ಳಿ ಠಾಣಾಧಿಕಾರಿ, ಕುಂದಾಪುರ ಠಾಣಾಧಿಕಾರಿಗಳಿಗೂ ನೀಡಿರುವ ಉಲ್ಲೇಖವಿದೆ.






