ಸಾಂಸ್ಕೃತಿಕ
ಖ್ಯಾತ ನಟಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಮದುವೆಯಾಗಿ ಮೂರನೇ ಪತಿಗೂ ಡಿವೋರ್ಸ್
Views: 240
ಕನ್ನಡ ಕರಾವಳಿ ಸುದ್ದಿ: ಖ್ಯಾತ ನಟಿಯೊಬ್ಬರು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಮದುವೆಯಾಗಿ, ಇದೀಗ ಮೂರನೇ ಪತಿಗೂ ಡಿವೋರ್ಸ್ ಕೊಟ್ಟಿದ್ದಾರೆ.
ಮಲಯಾಳಂ ನಟಿ ಮೀರಾ ವಾಸುದೇವನ್ ಅವರು ಛಾಯಾಗ್ರಾಹಕ ವಿಪಿನ್ ಪುತಿಯಂಕಂ ಅವರೊಂದಿಗಿನ ವಿವಾಹ ಅಧಿಕೃತವಾಗಿ ವಿಚ್ಛೇದನದಲ್ಲಿ ಕೊನೆಗೊಂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ಈ ದಂಪತಿ 2024ರಲ್ಲಿ ವಿವಾಹವಾಗಿದ್ದರು. ಇದೀಗ ಮೀರಾ ವಾಸುದೇವನ್ ಪತಿ ವಿಪಿನ್ ಪುತಿಯಂಕಂ ಅವರಿಂದ ವಿಚ್ಛೇದನ ಘೋಷಿಸಿದ್ದಾರೆ.
ಮೀರಾ ವಾಸುದೇವನ್ ಅವರು 2005ರಲ್ಲಿ ವಿಶಾಲ್ ಅಗರವಾಲ್ ಎಂಬುವರನ್ನು ಕನ್ನಡ ಮದುವೆಯಾಗಿದ್ದರು. 2010ರಲ್ಲಿ ಮದುವೆ ಮುರಿದುಬಿತ್ತು. ಬಳಿಕ 2021ರಲ್ಲಿ ಮಲಯಾಳಂ ನಟ ಜಾನ್ ಕೊಕ್ಕೇನ್ ಜೊತೆ ಮೀರಾ ಎರಡನೇ ವಿವಾಹ ಜರುಗಿತ್ತು. ಈ ದಾಂಪತ್ಯದಲ್ಲಿ ಓರ್ವ ಪುತ್ರನಿಗೂ ಜನ್ಮ ನೀಡಿದ್ದ ಮೀರಾ ವಸುದೇವನ್ 2024ರಲ್ಲಿ ವಿಪಿನ್ ಪುತಿಯಂಕಮ್ ಜೊತೆ ಮದುವೆಯಾಗಿದ್ದರು. ಇದೀಗ ಮೂರನೇ ಮದುವೆಯ ಬಂಧನದಿಂದಲೂ ಹೊರ ಬಂದಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ.






