ಇತ್ತೀಚಿಗಷ್ಟೇ ಬ್ಯಾಂಕ್ ಉದ್ಯೋಗಕ್ಕೆ ಸೇರಿ ಮದುವೆ ತಯಾರಿಯಲ್ಲಿರುವಾಗಲೇ ಆತ್ಮಹತ್ಯೆ
Views: 53
ಕನ್ನಡ ಕರಾವಳಿ ಸುದ್ದಿ: ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ ಎಸ್‌ಬಿಐನ ಮಹಿಳಾ ಉದ್ಯೋಗಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸುಬ್ಬಣ್ಣ ಬಡಾವಣೆಯಲ್ಲಿ ಸಂಭವಿಸಿದೆ.ಕಾಸರ ಗೋಡು ಮೂಲದ ಚಂದ್ರನ್‌ರ ಪುತ್ರಿ ಅನುಶ್ರೀ (26) ನೇಣಿಗೆ ಶರಣಾದವರು.
ಅನುಶ್ರೀ ಇತ್ತೀಚಿಗಷ್ಟೇ ಎಸ್‌ಬಿಐನಲ್ಲಿ ಉದ್ಯೋಗಕ್ಕೆ ಸೇರಿದ್ದು, ತರಬೇತಿ ವೇಳೆ ಎರ್ನಾಕುಲಂನ ಎಸ್‌ಬಿಐ ಉದ್ಯೋಗಿ ಇರಟ್ಟಿ ಮೂಲದ ಅಮಲ್ ಅವರ ಪರಿಚಯವಾಗಿತ್ತು. ಇಬ್ಬರು ಪರಸ್ಪರ ಪ್ರೀತಿಸಿದ್ದು, ಹಿರಿಯರ ಸಮ್ಮುಖದಲ್ಲಿ ಮದುವೆ ನಿಶ್ಚಯವಾಗಿತ್ತು. ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ ಜೋಡಿ ಆತ್ಮಹತ್ಯೆಗೆ ಶರಣಾಗಿದ್ದು ಏಕೆ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಮಂಗಳವಾರ ರಾತ್ರಿ ಅನುಶ್ರೀ ತನ್ನ ತಂದೆ-ತಾಯಿ, ಸಹೋದರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾಳೆ ಎನ್ನಲಾಗಿದೆ. ಅನಂತರ ಏನಾಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಅಮುಲ್ ಅನುಶ್ರೀಗೆ ರಾತ್ರಿ ನೀನು ಸತ್ತರೆ ನಾನು ಸಹ ಸಾಯುತ್ತೇನೆಂದು ಮೆಸೇಜ್ ಮಾಡಿದ್ದ ಎನ್ನಲಾಗಿದೆ. ಅನುಶ್ರೀ ಆತ್ಮಹತ್ಯೆ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಅಮುಲ್ ಬುಧವಾರ ಬೆಳಗ್ಗೆ ಇರಟ್ಟಿ ನಗರದ ಲಾಡ್ಜ್ ಒಂದರಲ್ಲಿ ರೂಂ ಪಡೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆ ಅನಂತರ ವಾರಸಸುದಾರರಿಗೆ ಒಪ್ಪಿಸಲಾಗಿದೆ.






