ಜನಮನ
ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ನಿಧನ

Views: 113
ಬೆಂಗಳೂರು: ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್(67) ಇಂದು ನಿಧನರಾದರು.
ಕರ್ನಾಟಕದ ವಿದ್ಯುನ್ಮಾನ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಂದು ಹೆಸರು ಗಳಿಸಿದ್ದ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾದರು
ಮೂಲತಃ ದಕ್ಷಿಣ ಕನ್ನಡದವರಾಗಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ.ಇವರ ತಂದೆ ಬಿ ಜಿ ಶಶಿಕಾಂತ್ ಜೈನ್ ಹೆಸರಾಂತ ಜ್ಯೋತಿಷಿಗಳಾಗಿದ್ದವರು. ಜ್ಯೋತಿರ್ವಿದ್ಯೆಯಲ್ಲಿ ಇಡೀ ದೇಶದಲ್ಲಿ ಹೆಸರು ಮಾಡಿದ್ದ ದಿವಂಗತ ಬಿ ಜಿ ಶಶಿಕಾಂತ್ ಜೈನ್ ರ ಪುತ್ರ ಎಸ್ ಕೆ ಜೈನ್ ತಂದೆಯ ಬಳಿಯಲ್ಲಿ ಜ್ಯೋತಿಷ್ಯವನ್ನು ಕಲಿತರು.
ಉದಯ ಟಿವಿ,ಟಿವಿ9 ವಾಹಿನಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮವನ್ನು ನೆಡೆಸಿಕೊಡುವುದರ ಮೂಲಕ ಕನ್ನಡ ವಿದ್ಯುನ್ಮಾನ ಮಾಧ್ಯಮದ ಮೊಟ್ಟಮೊದಲ ಜ್ಯೋತಿಷಿ ಎಂಬ ಹೆಸರಿನೊಂದಿಗೆ ಖ್ಯಾತಿ ಹೊಂದಿದ್ದರು.






