ಖಾಸಗಿ ಬಸ್ ದರ ದಿಢೀರ್ ಏರಿಕೆ; ಮತದಾನ ಹಕ್ಕು ಚಲಾಯಿಸಲು ಊರಿಗೆ ತೆರಳಲು ಸಜ್ಜಾಗಿದ್ದವರಿಗೆ ಶಾಕ್!

Views: 47
ಏಪ್ರಿಲ್ 26ಕ್ಕೆ 14 ಲೋಕ ಕ್ಷೇತ್ರಗಳಿಗೆ ಮೊದಲ ಹಂತದ ಎಲೆಕ್ಷನ್ ನಡೆಯಲಿದ್ದು, ಹೀಗಾಗಿ ಜನ 25ರ ರಾತ್ರಿ ಊರಿಗೆ ತೆರಳಲು ಸಜ್ಜಾಗಿದ್ದಾರೆ.
ಮತದಾನಕ್ಕಾಗಿ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ ಮತದಾರರಿಗೆ ಶಾಕ್ ಶುರುವಾಗಿದೆ. ಖಾಸಗಿ ಬಸ್ಗಳಿಗೆ ಡಿಮ್ಯಾಂಡ್ ಶುರುವಾಗಿದೆ. ಇತ್ತ ಟಿಕೆಟ್ ರೇಟ್ ನೋಡಿ ಜನ ಸುಸ್ತಾಗಿದ್ದಾರೆ.
ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ, ಮೈಸೂರಿಗೆ ತೆರಳಲು ಏಳು ಜಿಲ್ಲೆಗಳಿಗೆ ಹೆಚ್ಚುವರಿ ಬಸ್ಗಳನ್ನು ಒದಗಿಸುವಂತೆ ಡಿಮ್ಯಾಂಡ್ ಹೆಚ್ಚಾಗಿದೆ. ಖಾಸಗಿ ಬಸ್ ಮಾಲೀಕರ ಸಂಘಕ್ಕೆ ರಾಜಕೀಯ ಮುಖಂಡರು ಬೇಡಿಕೆ ಇಟ್ಟಿದ್ದು, ಬೇಡಿಕೆ ಹೆಚ್ಚಾಗುತ್ತಿದ್ದಂತೆ ಖಾಸಗಿ ಬಸ್ ದರ ಒನ್ ಟು ಡಬಲ್ ಏರಿಕೆಯಾಗಿದೆ
ಬೆಂಗಳೂರು ಹಾಗೂ ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ 500 ರಿಂದ 1000 ರೂಪಾಯಿ ಟಿಕೆಟ್ ದರ ಇರ್ತಿತ್ತು.. ಆದ್ರೆ ಏಪ್ರಿಲ್ 25ಕ್ಕೆ 1600 ರಿಂದ ₹1950 ರವರೆಗೆ ದರ ಏರಿಕೆಯಾಗಿದೆ. ಇನ್ನು, ಬೆಂಗಳೂರಿಂದ ಉಡುಪಿಗೆ 600ರಿಂದ ₹950ರವರೆಗಿದ್ದ ಟಿಕೆಟ್ ದರ 1650 ರಿಂದ ₹1950ಕ್ಕೆ ಏರಿಕೆಯಾಗಿದೆ. ಬೆಂಗಳೂರಿಂದ ಚಿಕ್ಕಮಗಳೂರಿಗೆ 550 ರಿಂದ ₹600 ಇದ್ದ ಬೆಲೆ ಏಪ್ರಿಲ್ 25ಕ್ಕೆ 1100 ರಿಂದ 1600ಕ್ಕೆ ಏರಿಕೆಯಾಗಿದೆ. ಇತ್ತ ಹಾಸನಕ್ಕೆ ಸಾಮಾನ್ಯ ದಿನಗಳಲ್ಲಿ 650 ರಿಂದ 850 ಇದ್ದ ಟಿಕೆಟ್ ದರ ಬರೋಬ್ಬರಿ ₹1200ರಿಂದ 1600ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಬಸ್ ದರ 450 ರಿಂದ ₹650ಕ್ಕೆಲ್ಲಾ ಸಿಗ್ತಾ ಇತ್ತು. ಆದ್ರೆ ಎಲೆಕ್ಷನ್ ಇರೋದ್ರಿಂದ 800 ರಿಂದ 1200ಕ್ಕೆ ಏರಿಕೆಯಾಗಿದೆ.
ಸಾಮಾನ್ಯವಾಗಿ ಬೆಂಗಳೂರಿನಿಂದ ಮಂಗಳೂರಿಗೆ 650 ರೂನಿಂದ ಪ್ರಾರಂಭವಾಗುವ ನಾನ್ ಏಸಿ ಬಸ್ ಗಳ ಟಿಕೆಟ್ ಗಳ ದರ 2250 ರೂವರೆಗೂ ತಲುಪಿದೆ. ಇನ್ನು ಎಸಿ ಬಸ್ ಗಳ ಟಿಕೆಟ್ ಗಳ ದರ 1000 ರೂ ಇದ್ದುದ್ದು ಸುಮಾರು 3000 ರೂ ವರೆಗೂ ತಲುಪಿದೆ. ಇನ್ನು ಬುಧವಾರ ರಾತ್ರಿ ಬೆಂಗಳೂರಿನಿಂದ ಮಂಗಳೂರು. ಉಡುಪಿ ಕಡೆಗೆ, ಶುಕ್ರವಾರ, ಶನಿವಾರ, ಭಾನುವಾರ ರಾತ್ರಿಗಳಂದು ಉಡುಪಿ. ಮಂಗಳೂರಿನಿಂದ ಬೆಂಗಳೂರಿಗೆ ಹೊರಡುವ ಬಸ್ ಟಿಕೆಟ್ ಗಳ ದರವೂ ಹೆಚ್ಚು ಕಡಿಮೆ ಇದೇ ರೀತಿ ಇದೆ.






