ಆರೋಗ್ಯ

ಕೋವಿಡ್-19 ಆಯ್ತು.. ಚೀನಾದಲ್ಲೀಗ ನಿಗೂಢ ಜ್ವರ…! ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

ಸೋಂಕು ಪೀಡಿತರಿಂದ ಅಂತರ ಕಾಯ್ದುಕೊಳ್ಳುವುದು, ಜ್ವರದ ಲಕ್ಷಣಗಳು ಕಂಡುಬಂದ್ರೆ ಮನೆಗಳಲ್ಲೇ ಇರುವುದು, ಅಗತ್ಯಬಿದ್ರೆ ಪರೀಕ್ಷೆ, ವೈದ್ಯಕೀಯ ಆರೈಕೆ ಪಡೆಯುವುದು ಹಾಗೂ ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.--ವಿಶ್ವ ಆರೋಗ್ಯ ಸಂಸ್ಥೆ

Views: 0

ಪ್ರಪಂಚಕ್ಕೆಲ್ಲಾ ಕೊರೊನಾ ಹಬ್ಬಿಸಿದ್ದ ಡ್ರ್ಯಾಗನ್ ರಾಷ್ಟ್ರ ಚೀನಾ ತಾನು ಮಾಡಿದ್ದ ಪಾಪಕ್ಕೆ ಫಲ ಉಣ್ಣುತ್ತಿರುವಂತೆ ಕಾಣ್ತಿದೆ. ಒಂದಿಲ್ಲೊಂದು ಮಹಾಮಾರಿಗಳು ಚೀನಾವನ್ನು ಹಿಂಡಿಹಿಪ್ಪೆ ಮಾಡ್ತಿದೆ. ಸದ್ಯ ಚೀನಾದಲ್ಲಿ ಮತ್ತೊಂದು ನಿಗೂಢ ಸೋಂಕು ಸ್ಫೋಟಗೊಂಡಿದ್ದು ಇಡೀ ಜಗತ್ತಿನ ಆತಂಕ ಹೆಚ್ಚಿಸಿದೆ. 2019ರಲ್ಲಿ ಕೊರೊನಾಗೆ ಜನ್ಮ ನೀಡಿದ್ದ ಚೀನಾ ಸತತ ವೈರಸ್​​ಗಳ ದಾಳಿಯಿಂದ ತತ್ತರಿಸಿ ಹೋಗ್ತಿದೆ. ಕಳೆದ 4 ವರ್ಷಗಳಿಂದ ಅದ್ರಲ್ಲೂ ಅಕ್ಟೋಬರ್ 2023ರ ಮಧ್ಯಭಾಗದಿಂದ ಇನ್‌ಫ್ಲೂಯೆಂಜಾ ಮಾದರಿ ಅನಾರೋಗ್ಯ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗ್ತಿವೆ.

ಚೀನಾ ಈಗ ಮತ್ತೊಂದು ಸಾಂಕ್ರಾಮಿಕ ರೋಗವನ್ನ ಎದುರಿಸುತ್ತಿದೆ. ಚೀನಾದ ಹಲವು ನಗರಗಳಲ್ಲಿ ನ್ಯುಮೋನಿಯಾದಂತಹ ನಿಗೂಢ ಸೋಂಕು ಹರಡಿದೆ. ಚೀನಾದ ಶಾಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ರೋಗದಿಂದ ಮಕ್ಕಳು ತತ್ತರಿಸಿ ಹೋಗಿದ್ದಾರೆ. ಮಕ್ಕಳಲ್ಲಿ ಶ್ವಾಸಕೋಶದ ಉರಿಯೂತ, ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಸ್ಪತ್ರೆಗಳು ಮಕ್ಕಳಿಂದ ತುಂಬಿ ತುಳುಕುತ್ತಿವೆ. ಮಕ್ಕಳಲ್ಲಿ ಏಕಾಏಕಿ ಅನಾರೋಗ್ಯ ಕಾಣಿಸಿಕೊಳ್ತಿರುವ ಕಾರಣ ಆರೋಗ್ಯ ಪರಿಸ್ಥಿತಿಯನ್ನ ಸುಧಾರಿಸಲು ಚೀನಾ ಹೆಣಗಾಡುತ್ತಿದೆ. ಚೀನಾದ ರಾಜಧಾನಿ ಬೀಜಿಂಗ್ ಹಾಗೂ ಲಿಯೋನಿಂಗ್ ಪ್ರಾಂತ್ಯದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.

ಸೋಂಕುಪೀಡಿತ ಮಕ್ಕಳಿಂದ ಆಸ್ಪತ್ರೆಗಳು ತುಂಬಿ ಹೋಗಿವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲಿನ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ ಕಾರಣ ಇಂತಹ ಸೋಂಕುಗಳು ಬರುತ್ತಿವೆ ಅಂತ ಚೀನಾದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಪುಟ್ಟಪುಟ್ಟ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸೋಂಕು ಇದಾಗಿದ್ದು ಸೋಂಕಿತ ಮಕ್ಕಳಲ್ಲಿ ವಿಪರೀತ ಜ್ವರ, ಶ್ವಾಸಕೋಶದ ಉರಿಯೂತ ಇರಲಿದೆ. ಬಳಿಕ ಶ್ವಾಸಕೋಶದ ಉರಿಯೂತ ನಿಮ್ಯೋನಿಯಾಕ್ಕೆ ತಿರುಗಲಿದೆ. RSV, ಇತರೆ ಉಸಿರಾಟ ಸಂಬಂಧಿಸಿದ ಲಕ್ಷಣಗಳು ಇದಲ್ಲಿ ಕಂಡುಬಂದಿಲ್ಲ ಎನ್ನಲಾಗಿದೆ. ಇನ್ನು ಚೀನಾದಲ್ಲಿ ಹರಡುತ್ತಿರುವ ಸೋಂಕಿನ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಮತ್ತಷ್ಟು ವರದಿ ನೀಡುವಂತೆ ಕೇಳಿದೆ. ನಿಗೂಢ ಜ್ವರ ಸಂಬಂಧ ಒಂದಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಜಗತ್ತಿಗೆ ಕೋವಿಡ್ ನೀಡಿ ಅಲ್ಲೋಲ ಕಲ್ಲೋಲ ಮಾಡಿದ್ದ ಚೀನಾ ಮತ್ತೊಂದು ಸಾಂಕ್ರಾಮಿಕ ಬಿರುಗಾಳಿಗೆ ತತ್ತರಿಸಿದೆ. ಕೊರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ ಚೀನಾದಲ್ಲಿ ಇನ್ನೊಂದು ಆರೋಗ್ಯ ತುರ್ತು ಪರಿಸ್ಥಿತಿ ಭೀತಿ ಹುಟ್ಟಿಸಿದ್ದು ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ.

Related Articles

Back to top button
error: Content is protected !!