ಕೋಟೇಶ್ವರ ಯೋಗ ಶಿಬಿರ ಉದ್ಘಾಟನೆ

Views: 166
ಕೋಟೇಶ್ವರ :ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೋಟೇಶ್ವರ ಓಂ ಯೋಗ ವಿದ್ಯಾ ಮಂದಿರ ಇದರ ದಶಮಾನೋತ್ಸವ ಪ್ರಯುಕ್ತ ಕೋಟೇಶ್ವರ ಗ್ರಾಮ ವಿಕಾಸ ಸಮಿತಿ ಕೋಟೇಶ್ವರ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ ಇದರ ಸಹಯೋಗದೊಂದಿಗೆ ಜೂನ್ 10 ರಂದು ಬೆಳಿಗ್ಗೆ 5.30ಕ್ಕೆ ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಯೋಗ ಶಿಬಿರ ಉದ್ಘಾಟಿಸಿಸಲಾಯಿತು.
ಕೋಟೇಶ್ವರ ರೋಟರಿ ಕ್ಲಬ್( ರಿ) ಇದರ ಭಾವಿ ಅಧ್ಯಕ್ಷರಾದ ಸತೀಶ್ ನಾಯಕ್ ಅವರು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು.ಅವರು ಮಾತನಾಡಿ, ಶಾರೀರಿಕ ಆರೋಗ್ಯ ಮತ್ತು ಒತ್ತಡಗಳ ನಿವಾರಣೆಗೆ ಯೋಗ ಪ್ರಯೋಜನಕಾರಿ, ಯೋಗದ ಮೂಲಕ ಮನಸ್ಸು ಬುದ್ಧಿಯನ್ನು ನಿಯಂತ್ರಿಸುವ ಮೂಲಕ ಜ್ಞಾನ ಸಂಪಾದಿಸಿಕೊಂಡರೆ ಮನೋಬಲ ವೃದ್ಧಿಯಾಗಿ ಏನನ್ನೂ ಸಾಧಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಗ್ರಾಮ ವಿಕಾಸ ಸಮಿತಿಯ ಸಂಯೋಜಕರಾದ ರಾಮಚಂದ್ರ ಗಾಣಿಗ, ಓಂ ಯೋಗ ವಿದ್ಯಾಮಂದಿರದ ವ್ಯವಸ್ಥಾಪಕರಾದ ಬಿ. ಅಣ್ಣಪ್ಪ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಧನ್ವಿ ಪ್ರಸಾದ್ ಮತ್ತು ಸಾದ್ವಿ ಪ್ರಸಾದ್ ಪ್ರಾರ್ಥನೆಗೈದರು. ಯೋಗ ಶಿಕ್ಷಕಿ ಶ್ರೀಮತಿ ಗೀತಾ. ಎಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಯೋಗ ಶಿಕ್ಷಕ ಅಣ್ಣಪ್ಪ ಅವರಿಂದ ಯೋಗ ತರಬೇತಿ ನಡೆಯಿತು.








