ಕರಾವಳಿ
ಕೋಟೇಶ್ವರ: ಬೀಜಾಡಿ ಕಡಲಿಗಿಳಿದ ಯುವಕ ನೀರು ಪಾಲು

Views: 220
ಕುಂದಾಪುರ:ಕೋಟೇಶ್ವರ ಬೀಜಾಡಿ ಎಂಬಲ್ಲಿ ಸ್ನೇಹಿತನ ಮನೆಯಲ್ಲಿ ವಿವಾಹ ಕಾರ್ಯಕ್ರಮಕ್ಕೆ ತಿಪಟೂರಿನಿಂದ ಬಂದ ಯುವಕರಿಬ್ಬರು ಬುಧವಾರ ಸಮುದ್ರ ವಿಹಾರಕ್ಕೆಂದು ನೀರಿಗೆ ಇಳಿದಿದ್ದು, ಜೋರಾದ ಅಲೆಗಳ ರಭಸಕ್ಕೆ ಓರ್ವ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾನೆ.
ನೀರು ಪಾಲಾದ ವ್ಯಕ್ತಿಯನ್ನು ತಿಪಟೂರು ಮೂಲದ ಯೊಗೀಶ್ (23) ಎಂದು ತಿಳಿಯಲಾಗಿದೆ, ಇನ್ನೋರ್ವನನ್ನು ರಕ್ಷಣೆ ಮಾಡಲಾಗಿದೆ.
ಸಂಜೆಯವರೆಗೂ ಕಾಣೆಯಾದ ಯುವಕನ ಶವ ಹುಡುಕಾಟದಲ್ಲಿ ಪೊಲೀಸರು, ಮೀನುಗಾರರು, ಸ್ಥಳೀಯರು ಸತತ ಪ್ರಯತ್ನದಲ್ಲಿದ್ದಾರೆ.






