ಇತರೆ
ಕೋಟೇಶ್ವರ: ಕ್ಷೌರದ ಅಂಗಡಿಯಲ್ಲಿಯೇ ಕ್ಷೌರಿಕನ ಸಾವು
Views: 196
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದ ಬೀಚ್ ರಸ್ತೆ ಪಕ್ಕದಲ್ಲಿರುವ ಕ್ಷೌರದ ಅಂಗಡಿಯಲ್ಲಿ ಕ್ಷೌರಿಕನೊಬ್ಬ ಸಾವನಪ್ಪಿದ ಘಟನೆ ನಡೆದಿದೆ.
ಶಶಿಕಾಂತ ಮಹಾಲೆ (48) ಮೃತಪಟ್ಟವರು.
ಶಶಿಕಾಂತ್ ಮಧ್ಯ ವ್ಯಸನಿಯಾಗಿದ್ದು, ಪತ್ನಿಯೊಂದಿಗೆ ವೈಮನಸ್ಸು ಹೊಂದಿ ಹೆಚ್ಚಾಗಿ ತನ್ನ ಕ್ಷೌರದ ಅಂಗಡಿಯಲ್ಲಿಯೇ ಇರುತ್ತಿದ್ದರು. ಡಿ. 23ರ ಮಧ್ಯಾಹ್ನ ಸ್ಥಳೀಯರೊಬ್ಬರು ಇವರ ಸಂಬಂಧಿಕರಿಗೆ ಕರೆ ಮಾಡಿ, ಕ್ಷೌರದ ಅಂಡಿಯ ಬಾಗಿಲು ಅರ್ಧವಷ್ಟೇ ತೆರೆದಿದ್ದು ಶಶಿಕಾಂತ್ ಮಲಗಿದಂತೆ ಕಾಣುತ್ತಿದೆ ಎಂದು ತಿಳಿಸಿದಾಗ ಸಾವಿನ ವಿಚಾರ ಬೆಳಕಿಗೆ ಬಂದಿದೆ.
ಸಂಬಂಧಿಕರಾದ ಕೃಷ್ಣಮೂರ್ತಿ ಭಂಡಾರಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






