ಇತರೆ

ಕೋಟೇಶ್ವರ:ಮೂಡುಗೋಪಾಡಿಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Views: 179

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಸಮೀಪ ಮೂಡುಗೋಪಾಡಿಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.13 ರಂದು ಸಂಭವಿಸಿದೆ.

ವೆಂಕಟೇಶ ಮರಕಾಲ ಅವರ ಪುತ್ರ ನಾಗರಾಜ್ ಕುಂದರ್ (38) ಅವರು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ಮನೆಯ ರೂಮ್‌ ನ ಸ್ಲಾಬ್‌ ನ ಹುಕ್ಕಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ.

ಇವರು ಅವಿವಾಹಿತರಾಗಿದ್ದು, ರೆಡಿಮೇಡ್ ಪಾಗರ ಮಾಡುವ ಕೆಲಸ ಮಾಡಿಕೊಂಡಿದ್ದರು.ತಂದೆ ವೆಂಕಟೇಶ ಮರಕಾಲ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!