ಜನಮನ

ಕೊಲ್ಲೂರು ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಯುವಕನ ಮೃತದೇಹ ಪತ್ತೆ

Views: 22

ಕುಂದಾಪುರ :ಭದ್ರಾವತಿಯಿಂದ ಕೊಲ್ಲೂರು ಅರಶಿನ ಗುಂಡಿ ಜಲಪಾತ ವೀಕ್ಷಣೆಗೆ ಬಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಯುವಕ ಶರತ್ ಕುಮಾರ್ ಅವರ ಮೃತ ದೇಹ ಏಳು ದಿನದ ನಂತರ ಪತ್ತೆಯಾಗಿದೆ.

ಒಂದು ವಾರದಿಂದ ಕೊಚ್ಚಿ ಹೋದ ಯುವಕನ ಶೋಧ ಕಾರ್ಯ ಭರದಿಂದ ಸಾಗಿತ್ತು, ಅಗ್ನಿಶಾಮಕ ದಳ, ಮುಳುಗು ತಜ್ಞರು, ರಕ್ಷಣಾ ಸಿಬ್ಬಂದಿಗಳು, ಅರಣ್ಯ ಇಲಾಖಾ ಸಿಬ್ಬಂದಿಗಳು,ಪೊಲೀಸ್ ಇಲಾಖೆಯವರು ಹುಡುಕಾಟದಲ್ಲಿ ಸತತ ಪ್ರಯತ್ನ ಮಾಡಿದ್ದು, ಶೋಧ ಕಾರ್ಯ ಮುಂದುವರಿದು

ಶರತ್ ನೀರಿಗೆ ಬಿದ್ದ ಸ್ವಲ್ಪ ದೂರದ ಕಲ್ಲು ಪೊಟರೆಯೊಳಗೆ ಸಿಕ್ಕಿ ಹಾಕಿಕೊಂಡು ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Related Articles

Back to top button
error: Content is protected !!