ಇತರೆ

ಕುಂಭಾಶಿ ಶ್ರೀ ನಾಗಾಚಲ ಅಯ್ಯಪ್ಪ ಸ್ವಾಮಿ ದೇಗುಲದ ನಿರ್ಮಾಣಕರ್ತ ಅರುಣ್ ಕಲ್‌ಗುಜ್ಜೀಕರ್ ನಿಧನ

Views: 190

ಕನ್ನಡ ಕರಾವಳಿ ಸುದ್ದಿ: ಕುಂಭಾಶಿಯಲ್ಲಿನ ಶ್ರೀ ನಾಗಾಚಲ ಅಯ್ಯಪ್ಪ ಸ್ವಾಮಿ ದೇಗುಲದ ನಿರ್ಮಾಣಕರ್ತರು, ಕರ್ನಾಟಕ ಸರಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ರಿಜಿಸ್ಟರ್ ಆಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದ ವಕ್ವಾಡಿ ರಸ್ತೆಯ ಅರುಣ್ ಕಲ್‌ಗುಜ್ಜೀಕರ್ (74) ಅವರು ಹೃದಯಾಘಾತದಿಂದ ಡಿ. 30 ರಂದು, ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರ ಡಾ। ರಾಮ್ ಪ್ರಕಾಶ, ಪುತ್ರಿಯರಾದ ಡಾ। ರೂಪಾ, ಹಾಗೂ ಡಾ। ದೀಪಾ ಅವರನ್ನು ಅಗಲಿದ್ದಾರೆ.

ಸಬ್ ರಿಜಿಸ್ಟರ್ ಆಗಿ ಕಾರವಾರ, ಕುಂದಾಪುರ, ಉಡುಪಿ, ಕುಂದಾಪುರ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ ಅವರು ಜಿಲ್ಲಾ ರಿಜಿಸ್ಟರ್ ಆಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದರು.

ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ಅರುಣ್ ಕಲ್‌ಗುಜ್ಜೀಕರ್ ಅವರ ಕನಸಿನ ಕೂಸಾದ ಶಬರಿಮಲೆ ಮಾದರಿಯ18 ಮೆಟ್ಟಿಲುಗಳನ್ನು ಹೊಂದಿದ  ಕುಂಭಾಶಿಯಲ್ಲಿನ ಶ್ರೀ ನಾಗಾಚಲ ಅಯ್ಯಪ್ಪ ಸ್ವಾಮಿ ದೇಗುಲದ ನಿರ್ಮಾಣಕೃತರಾಗಿ, ಅದರ ಆಡಳಿತ ಧರ್ಮದರ್ಶಿಯಾಗಿ ಸಮಿತಿ ರಚಿಸಿ, ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಶೃಂಗೇರಿ ಶ್ರೀ ಮಠದ ಭಕ್ತರಾಗಿದ್ದು, ಇತ್ತೀಚೆಗೆ ಈ ದೇಗುಲವನ್ನು ಶ್ರೀ ಮಠಕ್ಕೆ ಸಮರ್ಪಿಸಿದ್ದರು.

ಅವರು ನಾಡವರ ಸಂಘದಲ್ಲಿ ಸಕ್ರಿಯರಾಗಿದ್ದು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.

 

Related Articles

Back to top button
error: Content is protected !!